ಬೆಳ್ತಂಗಡಿ: ಈ ದಿನ ರೋಟರಿ ಕ್ಲಬ್ ಬೆಳ್ತಂಗಡಿ ರೋಟರಿ ಜಲ ಸಂರಕ್ಷಣೆ ಜಿಲ್ಲಾ ಯೋಜನೆಯಡಿಯಲ್ಲಿ ಶ್ರೀ ರಾಜೇಂದ್ರ ಕಲ್ಬಾವಿ, ರೋ.ಪ್ರತಾಪ ಸಿಂಹ ನಾಯಕ್, ಶ್ರೀಕಾಂತ್ ಕಾಮತ್ ರವರ ಆಶಯದಂತೆ ರೋ.ಜಗದೀಶ್ ಪ್ರಸಾದ್ ರವರ ಸಂಪೂರ್ಣ ಸಹಕಾರದಲ್ಲಿ ಮುಂಡಾಜೆಯ ಜಗದೀಶ್ ಪ್ರಸಾದ್ ರವರ ಕೃಷಿ ಭೂಮಿಯಲ್ಲಿ ಇದ್ದ ಭತ್ತದ ಗದ್ದೆಯಲ್ಲಿ ವಾಟರ್ ಬ್ಯಾಂಕ್ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿರುತ್ತದೆ. ಹಣವನ್ನು ಬ್ಯಾಂಕ್ ನಲ್ಲಿ ಉಳಿತಾಯ ಮಾಡಿದಂತೆ ಗದ್ದೆಯಲ್ಲಿ ನೀರನ್ನು ಸಂಗ್ರಹಿಸಿ ನೀರಿನ ಬ್ಯಾಂಕನ್ನು ಸೃಷ್ಟಿಸಿ ಬತ್ತುತ್ತಿರುವ ಕೆರೆ, ಬಾವಿ, ಕೊಳವೆ ಬಾವಿಗಳಿಗೆ ಜೀವವನ್ನು ತುಂಬಿಸುವ ದೃಷ್ಟಿಯಿಂದ ಈ ವಾಟರ್ ಬ್ಯಾಂಕ್ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಹಮ್ಮಿಕೊಂಡಿರುತ್ತದೆ.
ಈ ಕಾರ್ಯಕ್ರಮದಲ್ಲಿ ರೋ.ಜಗದೀಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ರೋ.ಪ್ರತಾಪ ಸಿಂಹ ನಾಯಕ್, ರೋ.ರಾಜೇಂದ್ರ ಕಲ್ಬಾವಿ, ಅಧ್ಯಕ್ಷರಾದ ರೋ.ಬಿ.ಕೆ.ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ .ಕೆ.ವಿ. ಯವರು ಉಪಸ್ಥಿತರಿದ್ದರು. ಜಗದೀಶ್ ಪ್ರಸಾದ್ ರವರ ಸಹಕಾರದೊಂದಿಗೆ 0.75 ಎಕ್ರೆ ಸ್ಥಳದಲ್ಲಿ ಸುಮಾರು ರೂ.23,000/- ವೆಚ್ಚದೊಂದಿಗೆ ಈ ನೀರಿನ ಬ್ಯಾಂಕನ್ನು ಜಗದೀಶ್ ಪ್ರಸಾದ್ ರವರು ರಚಿಸಿರುತ್ತಾರೆ. ರೋಟರಿಯ ಈ ವಿನೂತನ ಯೋಜನೆಗೆ ರೋ. ಪ್ರತಾಪ ಸಿಂಹ ನಾಯಕ್ ಹಾಗೂ ರಾಜೇಂದ್ರ ಕಲ್ಬಾವಿಯವರು ಅಭಿನಂದನೆಗಳನ್ನು ಸಲ್ಲಿಸಿದರು.