ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಕಚೇರಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇನ್ನಿಲ್ಲ
ಕೆಲವೇ ಹೊತ್ತಿಗೆ ಮುನ್ನ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಹಲವು ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಸೀತಾಲಕ್ಷ್ಮೀ ಅಡ್ಯನಡ್ಕ ಬಳಿಯ ಕೇಪು ಕಲ್ಲಂಗಳದವರು. ಅಡ್ಯನಡ್ಕದಲ್ಲಿ ಆರಂಭಿಕ ಶಿಕ್ಷಣ ಪಡೆದರು.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಡಿಗ್ರಿ ಪಡೆದರು.
ನಂತರ ಕನ್ನಡದಲ್ಲಿ ಎಂ ಎ ಮಾಡಿದರು. ಬಳಿಕ ಡಾಕ್ಟರೇಟ್ ಪದವಿ ಪಡೆದರು.
ಇವರು ಹಿರಿಯ ಸಾಹಿತಿ ವಿ.ಗ. ನಾಯಕ ಅವರ ಪುತ್ರಿ.
ಕಳೆದ ಹಲವು ವರ್ಷಗಳಿಂದ ತಂದೆ, ತಾಯಿ ಜತೆ ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ವಾಸವಾಗಿದ್ದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದರು.
ಇವರ ಕುಟುಂಬ ಮೂಲತ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಕೋಡಿಯವರು. ಇವರ ತಂದೆ ಶಿಕ್ಷಕ ವೃತ್ತಿ ಸೇರಿದ ಬಳಿಕ ದ.ಕ.ದ ಅಡ್ಯನಡ್ಕಕ್ಕೆ ಬಂದಿದ್ದರು. ಸೀತಾ ಲಕ್ಚ್ಮಿ ಅವರ ಹುಟ್ಟು, ಬಾಲ್ಯ, ಬದುಕು ದ.ಕ. ದಲ್ಲೇ ಸಾಗಿತ್ತು.
ಪ್ರತಿಭಾನ್ವಿತೆಯಾಗಿದ್ದ ಸೀತಾ, ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ನಮ್ಮನ್ನಗಲಿದ ಸಹೋದರಿ, ಪತ್ರಕರ್ತೆ ಸೀತಾಲಕ್ಷ್ಮಿ ಕರ್ಕಿಕೋಡಿ ದಿವ್ಯಾತ್ಮಕ್ಕೆ ಚಿರಶಾಂತಿ ಕೋರುವ ರೋನ್ಸ್ ಬಂಟ್ವಾಳ್