ಕರಾವಳಿಯ ಹೃದಯ ಭಾಗದಲ್ಲಿರುವ 152 ವರ್ಷಗಳ ಭವ್ಯ ಇತಿಹಾಸವುಳ್ಳ ವಿಶ್ವವಿದ್ಯಾನಿಲಯ ಕಾಲೇಜು, ತನ್ನ ಶೈಕ್ಷಣಿಕ ಸಾಧನೆ ಮತ್ತು ಪಠ್ಯೇತರ ಚಟುಚಟಿಕೆಗಳ ಮೂಲಕ ರಾಜ್ಯದ ಮತ್ತು ನೆರೆ ರಾಜ್ಯದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿರುವ, ವಿಶ್ವವಿದ್ಯಾನಿಲಯ ಕಾಲೇಜು ಇದೀಗ 2020-21 ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದ್ದು ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಕಾಲೇಜಿನ ಕುರಿತಾಗಿ ಒಂದಿಷ್ಟು…

ತನ್ನ ಆಮೂಲಾಗ್ರ ಸಾಧನೆಗಾಗಿ ವಿವಿ ಕಾಲೇಜು ನ್ಯಾಕ್ ನಿಂದ ʼಎʼ ಗ್ರೇಡ್ ಪಡೆದಿದ್ದು, ಯುಜಿಸಿಯಿಂದ ಶ್ರೇಷ್ಠತಾ ಸಾಮರ್ಥ್ಯವಿರುವ ಕಾಲೇಜು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ರಾಷ್ಟ್ರೀಯ ಸಾಂಸ್ಥಿಕ ರ್ಯಾಂ ಕಿಂಗ್ ಫ್ರೇಮ್ವರ್ಕ್ನಲ್ಲಿ (NIRF) ಕಾಲೇಜು 200 ರ ಒಳಗಿನ ಸ್ಥಾನ ಪಡೆದಿದೆ. ಅನುಭವೀ ಬೋಧಕ ವರ್ಗ, ಸೇವಾಮನೋಭಾವದ ಶಿಕ್ಷಕೇತರ ಸಿಬ್ಬಂದಿ, ಸುಮಾರು 80,000 ಕ್ಕೂ ಹೆಚ್ಚು ಪುಸ್ತಕಗಳಿಗುವ ಸುಸಜ್ಜಿತ ಗ್ರಂಥಾಲಯ, ಕ್ರೀಡಾಂಗಣ, ವಿದ್ಯಾರ್ಥಿ ಸಂಘ, ಎನ್ಎಸ್ಎಸ್, ಎನ್ಸಿಸಿ, ರೆಡ್ಕ್ರಾಸ್, ರೋವರ್ಸ್ ಆಂಡ್ ರೇಂಜರ್ಸ್ ಸೇರಿದಂತೆ ಪಠ್ಯೇತರ ಚಟುವಟಿಕೆಗಾಗಿ 20 ಕ್ಕೂ ಹೆಚ್ಚು ಸಂಘಗಳು, ವಿದ್ಯಾರ್ಥಿ ವೇತನಗಳ ಸೌಲಭ್ಯ ಕಾಲೇಜಿನಲ್ಲಿದೆ.

ಲಭ್ಯವಿರುವ ಕೋರ್ಸುಗಳು

1.ಬ್ಯಾಚಲರ್ ಆಫ್ ಆರ್ಟ್ಸ್ (ಬಿಎ)

(ಇಂಗ್ಲಿಷ್, ಹಿಂದಿ, ಕನ್ನಡ, ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಜಿಯೋಗ್ರಫಿ, ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ)

2.ಬ್ಯಾಚಲರ್ ಆಫ್ ಸೈನ್ಸ್ (ಬಿ.ಎಸ್ಸಿ)

(ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಮೈಕ್ರೋಬಯಾಲಜಿ)

3.ಬ್ಯಾಚಲರ್ ಆಫ್ ಕಾಮರ್ಸ್ (ಬಿ.ಕಾಂ)

( ಬೋರ್ಡ್ ಆಫ್ ಸ್ಟಡೀಸ್ ಸೂಚಿಸಿದ ಎಲ್ಲಾ ವಿಷಯಗಳು)

ಕೋರ್ಸ್ ಅವಧಿ:

ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಂ (ಸಿಬಿಸಿಎಸ್) ಮಾದರಿಯ ಎಲ್ಲಾ ಕೋರ್ಸ್ಗಳು 6 ಸೆಮಿಸ್ಟರ್ (ಮೂರು ಶೈಕ್ಷಣಿಕ ವರ್ಷಗಳು) ಅವಧಿಯದಾಗಿದ್ದು ಪ್ರತಿಯೊಂದು ಸೆಮಿಸ್ಟರ್ನ ಕಾಲಾವಧಿ 16 ವಾರಗಳಾಗಿರುತ್ತದೆ. ಒಂದರಿಂದ ನಾಲ್ಕನೇ ಸೆಮಿಸ್ಟರ್ವರೆಗೂ ಎಲೆಕ್ಟಿವ್ ಫೌಂಡೇಶನ್ ವಿಷಯಗಳ ಕಲಿಕೆ ಕಡ್ಡಾಯವಾಗಿರುತ್ತದೆ.  


ಅರ್ಜಿ ಸಲ್ಲಿಕೆ ಹೇಗೆ?

•ಆಯ್ಕೆ ಬಯಸುವ ವಿದ್ಯಾರ್ಥಿಗಳು ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

•ಕಾಲೇಜಿನ ವೆಬ್‌ಸೈಟ್‌ (www.universitycollegemangalore.com) ನಲ್ಲಿ ಪ್ರವೇಶಾತಿ ಮಾಹಿತಿ ಹಾಗೂ ಪ್ರವೇಶಾತಿ ಅರ್ಜಿ ಲಭ್ಯವಿದ್ದು, ಅರ್ಜಿಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 23-07-2020 ರ ನಂತರ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸಬಹುದಾಗಿದೆ ಅಥವಾ ಆನ್ಲೈನ್ನಲ್ಲಿ ಅರ್ಜಿ ತುಂಬಲು ಈ ಲಿಂಕ್ ಬಳಸಬಹುದು - https://forms.gle/zA323mrdrPUppQq6A   

•ಭರ್ತಿಗೊಳಿಸಿದ ಅರ್ಜಿಯಲ್ಲಿ ತಮ್ಮ ಇಚ್ಛೆಯ ಸಂಯೋಜನೆ (combination)ಯನ್ನು ಆಧ್ಯತೆಯ ಮೇರೆಗೆ ನಮೂದಿಸಬೇಕು.

•ಅರ್ಜಿಯೊಂದಿಗೆ ಕೆಳಕಂಡ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು: ಪಿಯುಸಿ ಅಂಕಪಟ್ಟಿ, ಎಸ್ಎಸ್ಎಲ್ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ (TC), ಗುಣನಡತೆ ಪ್ರಮಾಣಪತ್ರ, ಮೀಸಲಾತಿ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಆದಾಯ ಪ್ರಮಾಣಪತ್ರ (ಎಸ್.ಸಿ/ಎಸ್.ಟಿ ಮತ್ತು ಪ್ರವರ್ಗ 1 ವಿದ್ಯಾರ್ಥಿಗಳಿಗೆ). ವಿದ್ಯಾರ್ಥಿ ಮತ್ತು ಹೆತ್ತವರ ಆಧಾರ್ ಕಾರ್ಡಿನ ಯಥಾಪ್ರತಿ.

ಭರ್ತಿಮಾಡಿದ ಅರ್ಜಿ ಫಾರಂಗಳನ್ನು ಅಗತ್ಯ ಪ್ರಮಾಣಪತ್ರಗಳೊಂದಿಗೆ ಕಾಲೇಜಿನ ಕಛೇರಿಯಲ್ಲಿ ಸಲ್ಲಿಸಲು ಕೊನೆಯ ದಿನಾಂಕ 31-07-2020.  ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ- 05-08-2020. ಸಂದರ್ಶನದ ದಿನಾಂಕವನ್ನು ಆಯ್ಕೆ ಪಟ್ಟಿಯೊಂದಿಗೆ ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ದೂರವಾಣಿ:  0824- 2424760

ವೆಬ್ಸೈಟ್: www.universitycollegemangalore.com

ಇಮೇಲ್: ucmangalore1@gmail.com ಅಥವಾ principal.ucmcollege@gmail.com