ಮಂಗಳೂರು (ಜು16):- ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯು ಶಕ್ತಿ ಅಡ್ವಾನ್ಸ್ ಲರ್ನಿಂಗ್[ಎಸ್‍ಎಎಲ್]ನ್ನು 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಫೌಂಡೇಶನ್ ಕೋರ್ಸ್‍ನ್ನಾಗಿ ಆರಂಭಿಸಿದೆ. ಇದು ಸಿಬಿಎಸ್‍ಇ ಪಠ್ಯಕ್ರಮದ ಜೊತೆಗೆ ಹೆಚ್ಚುವರಿ ಉಚಿತ ತರಬೇತಿಯಾಗಿದೆ. ಈ ಮೂಲಕ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಸಿದ್ಧಗೊಳಿಸುವ ವಿನೂತನ ಪ್ರಯೋಗದತರಭೇತಿಆಗಿದೆ.
ಶಕ್ತಿ ಎಡ್ವಾನ್ಸ್ಡ್ ಲರ್ನಿಂಗ್ [ಎಸ್‍ಎಎಲ್] 6,7,8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ತರಬೇತಿಯಾಗಿದೆ. ಈ ತರಬೇತಿಯು ವಿದ್ಯಾರ್ಥಿಗಳಿಗೆ ವಿವಿಧರಾಷ್ಟ್ರೀಯ, ರಾಜ್ಯಮಟ್ಟದ ಸ್ವರ್ಧಾತ್ಮಕ ಪರೀಕ್ಷೆಗಳು ಮತ್ತು ಓಲಿಂಪಿಯಾಡ್‍ಗಳಿಗೆ ತಯಾರಾಗಲು ಅನುಕೂಲವಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಅಡಗಿರುವ ಸ್ವಯಂ ಪ್ರತಿಭೆ, ವೈಜ್ಞಾನಿಕಚಿಂತನೆ ಮತ್ತು ಸ್ವರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ. ನಮ್ಮ ಪದವಿ ಪೂರ್ವ ಕಾಲೇಜಿನ ಅನುಭವಿ ವಿಷಯ ತಜ್ಞರಿಂದ ಕಾರ್ಯಾಗಾರಗಳನ್ನು ಹಾಗೂ ತರಬೇತಿಯನ್ನು ನೀಡಲಾಗುತ್ತದೆ. ಇದು ಭೋಧನೆಯಜೊತೆ ಪ್ರಯೋಗಿಕ ವಿಧಾನವನ್ನು ಹೊಂದಿರುವ ವಿಶೇಷ ಕಾರ್ಯಕ್ರಮವಾಗಿದೆ.
ಎಸ್‍ಎಎಲ್‍ನ ತರಬೇತಿಯು 6 ರಿಂದ 10ನೇ ತರಗತಿಯ ವರೆಗಿನ ಪರೀಕ್ಷೆಯಲ್ಲಿ ಹೆಚ್ಚಿನ ದರ್ಜೆಯಲ್ಲಿ ತೇರ್ಗಡೆಯಾಗಲು, ರಾಷ್ಟ್ರೀಯ ಮಂಡಳಿ, ಎನ್ ಟಿ ಎಸ್ ಇ ಮತ್ತು ಇತರೆ ರಾಷ್ಟೀಯ/ಅಂತರಾಷ್ಟ್ರೀಯ ಓಲಿಂಪಿಯಾಡ್ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಅನುಕೂಲವಾಗಲಿದೆ. ಇದು ವಿದ್ಯಾರ್ಥಿಯ ಭಾಷಾ ಪ್ರಾವಿಣ್ಯತೆ ಮತ್ತುಇತರೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಕಾರಿಯಾಗಲಿದೆ. ಎಸ್‍ಎಎಲ್, ನೀಟ್ ಮತ್ತು ಜೆಇಇ ತಯಾರಿಗೆ ಅಡಿಪಾಯ ಹಾಕುತ್ತದೆ. ಸಣ್ಣ ವಯಸ್ಸಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯ ಹಾಗೂ ವೃತ್ತಿ ಜೀವನವನ್ನು ಆಯ್ಕೆ ಮಾಡಲು ಸಹಕಾರಿಯಾಗಲಿದೆ.
ಎಸ್‍ಎಎಲ್ ಯಾವುದೇ ಹೆಚ್ಚುವರಿ ಹೊರೆಯಿಲ್ಲದೆ ವಿದ್ಯಾರ್ಥಿಗಳ ಗ್ರಹಣ ಮಟ್ಟ ಹಾಗೂ ತರಗತಿಗಳ ಮಟ್ಟಕ್ಕೆಅನುಗುಣವಾಗಿ ಬೋರ್ಡ್ ಮತ್ತು ಸುಧಾರಿತ ವಿಷಯಗಳನ್ನು ಕಲಿಯಲುಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ತಳಮಟ್ಟದಿಂದ ಉತ್ಕೃಷ್ಟ ಮಟ್ಟದ ವರೆಗೆ ಶಾಲಾ ಶಿಕ್ಷಣದಿಂದ ಸ್ವರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡಲು ಉಪಯುಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ಪುನರ್ ಮನನದ ಜೊತೆ ಆವರ್ತಕ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಯ ವಿಕಾಸವನ್ನು ನಿರ್ಣಹಿಸಲಾಗುತ್ತದೆ.
ಈ ಮೂಲಕ ವಿದ್ಯಾರ್ಥಿಗಳ ಕಲಿಕೆಯ ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಿಅವರುತಲುಪಬೇಕಾದದಾರಿ ಹಾಗೂ ವಿಷಯಗಳ ಕುರಿತಂತೆ ಮನವರಿಕೆ ಮಾಡಲಾಗುವುದು.
ನಮ್ಮ ವಿದ್ಯಾರ್ಥಿಗಳಿಗೆ ಅನುಭವಿ ಪಪೂ ಉಪನ್ಯಾಸಕರು ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿರುತ್ತಾರೆ, ಇವರೆ ಆವರ್ತಕ ಪರೀಕ್ಷೆಗಳನ್ನು ನಡೆಸುವುದರ ಜೊತೆಗೆ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತವರಣವನ್ನೂ ಸೃಷ್ಠಿಸುತ್ತಾರೆ.
ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಸುವ ಜೊತೆಗೆ ನಿರಂತರ ಕಾರ್ಯಾಗಾರಗಳು ರಾಷ್ಟ್ರೀಯ/ಅಂತರಾಷ್ಟ್ರೀಯ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನವನ್ನು ಕೊಡುವುದರ ಮೂಲಕ ಸ್ವರ್ಧಾತ್ಮಕ ಪರೀಕ್ಷೆಗೆ ಸಿದ್ದಗೊಳಿಸುತ್ತಾರೆ.
ಈ ವಿಧಾನದಿಂದ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಅವರ ಸಾಮರ್ಥ್ಯವನ್ನು ಗುರುತಿಸುತ್ತೇವೆ. ಈ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಯನ್ನುತರುವುದರಲ್ಲಿ ಸಹಕರಿಯಾಗುತ್ತದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ (2019-20)ರಲ್ಲಿ ಶಕ್ತಿ ಶಾಲೆಯಲ್ಲಿ ಎಸ್‍ಎಎಲ್‍ನ್ನು ಪ್ರಾರಂಭಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು. ನಿಟ್ಟೆ ಡಿಮ್ಡ್ ವಿವಿಯ ಕುಲಾಧಿಪತಿ ಡಾ. ಎನ್ ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದರು.
ಈಗಾಗಲೇ ವಿದ್ಯಾರ್ಥಿಗಳಿಗೆ ನೇರತರಗತಿ ಹಾಗೂ ಆನ್ ಲೈನ್ ತರಗತಿಯನ್ನು ನಡೆಸಿ ಕೊಡಲಾಗುತ್ತಿದೆ.
ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿಶೇಷತೆ:-
ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಈ ಜಿಲ್ಲೆಯ ಮತ್ತು ಅಂತರ್ ಜಿಲ್ಲೆಯ ವಿದ್ಯಾರ್ಥಿಗಳು ಇದ್ದಾರೆ. ಇವರಿಗೆ ಅನುಕೂಲವಾಗುವ ದೃಷ್ಠಿಯನ್ನುಇಟ್ಟುಕೊಂಡು ಬೋರ್ಡ್‍ನ ತರಗತಿ ಮುಗಿದ ನಂತರ ಈ ತರಭೇತಿಯನ್ನುಆಯೋಜಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ಅನೇಕ ಪೋಷಕರು ಆಸಕ್ತಿಯನ್ನು ತೋರಿಸಿರುತ್ತಾರೆ. ಇದು ಯಶಸ್ವಿಗೊಳ್ಳಲು ನಿಮ್ಮೇಲ್ಲರ ಸಹಕಾರವು ಅತ್ಯವಶ್ಯಕವಾಗಿವುದರಿಂದ ಇದಕ್ಕೆ ಹೆಚ್ಚಿನ ಪ್ರಚಾರ ನೀಡಬೇಕಾಗಿ ತಮ್ಮಲ್ಲಿ ವಿನಯಪೂರ್ವಕ ವಿನಂತಿ.
ಈ ಸಂದರ್ಭದಲ್ಲಿ ಶಕ್ತಿ ಎಡ್ವಾನ್ಸ್ಡ್ ಲರ್ನಿಂಗ್‍ನ ಪುಸ್ತಕವನ್ನು ಶಾಲೆಯ ಸಂಚಾಲಕರಾದ ಸಂಜೀತ್ ನಾಯಕ್ ಬಿಡುಗಡೆಗೊಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯುಕೇಶನ್‍ಟ್ರಸ್ಟ್‍ನ ಪ್ರಧಾನ ಸಲಹೆಗಾರರಮೇಶ್ ಕೆ, ಪ್ರಭಾಕರ ಜಿ. ಎಸ್ ಪ್ರಾಂಶುಪಾಲರು ಶಕ್ತಿ ಪಪೂ ಕಾಲೇಜು ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ವಿದ್ಯಾ ಜಿ. ಕಾಮತ್ ಉಪಸ್ಥಿತರಿದ್ದರು.