ಸಿಒಡಿಪಿ (ರಿ) ಸಂಸ್ಥೆ ಮಂಗಳೂರು ಮತ್ತು ಸ್ಪರ್ಶ ಯೋಜನೆಯ ವತಿಯಿಂದ ಸ್ವ ಸಹಾಯ ಸಂಘದ ಸದಸ್ಯರಿಗೆ ದಿನಾಂಕ 23.08.2020 ರಂದು ಕ್ಯಾನ್ಸರ್ ಮತ್ತು ಕೋವಿಡ್ 19 ರೋಗದ ಮಾಹಿತಿ ಕಾರ್ಯಕ್ರಮವನ್ನು ತಾರೆಮಾರ್ ನಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಿ.ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ಫಾ| ಓಸ್ವಲ್ಡ್ ಮೊಂತೇರೊ ಕೋವಿಡ್ 19 ರೋಗದ ಬಗ್ಗೆ ಜಾಗೃತಿ ನೀಡಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಕೆಲವು ಸೂತ್ರಗಳಾದ ಮಾಸ್ಕ್, ಸಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿ ಈ ರೋಗವನ್ನು ದೂರವಾಗಿಸಲು ಸಾಧ್ಯವಿದೆ ಎಂದು ಕರೆ ನೀಡಿದರು.
ಸ್ಪರ್ಶ ಕ್ಯಾನ್ಸರ್ ವಿರುದ್ಧ ಆಂದೋಲನ ಯೋಜನೆಯ ಸಂಯೋಜಕಿಯಾದ ಶಿಲ್ಪ ಡಿ ಸೋಜರವರು ಕ್ಯಾನ್ಸರ್ ಕಾಯಿಲೆ ಮತ್ತು ಅದನ್ನು ತಡೆಗಟ್ಟುವುದು, ಚಿಕಿತ್ಸೆ ಮತ್ತು ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಬಗ್ಗೆ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ವಿವರಿಸಿದರು ಮತ್ತು ರಾಸಾಯನಿಕ ವಸ್ತುಗಳ ಬಳಕೆಯ ಬದಲು ಸಾವಯವ ವಸ್ತುಗಳನ್ನು ಉಪಯೋಗಿಸುವುದರಿಂದ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫಾ| ಓಸ್ವಲ್ಡ್ ಮೊಂತೇರೊ ಸಿಒಡಿಪಿ ಸಂಸ್ಥೆಯ ವತಿಯಿಂದ ಸ್ಥಳೀಯ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಆಹಾರದ ಪೊಟ್ಟಣಗಳನ್ನು ತಾರೆಮಾರ್ ಸ್ವ ಸಹಾಯ ಸಂಘದ 62 ಸದಸ್ಯರಿಗೆ ವಿತರಿಸಲಾಯಿತು.
ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ಲೀಡಿಯಾ ಮೊರಸ್‍ರವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.