ಉಡುಪಿ ಮಾರ್ಚ್ 5 (ಕರ್ನಾಟಕ ವಾರ್ತೆ): ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕೆಗಳ ಕೆಲಸಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸಲು ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಅಂತಿಮ ಬಿ.ಕಾಂ.ಪದವಿ ವಿದ್ಯಾರ್ಥಿಗಳು ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ ಇಲ್ಲಿನ ಡೈರಿ ಸ್ಥಾವರಕ್ಕೆ ಇತ್ತೀಚೆಗೆ ಭೇಟಿ ನೀಡಿದರು.

ಮಂಗಳೂರು ಡೈರಿಯ ವಿವಿಧ ಭಾಗಗಳನ್ನು ಸಂದರ್ಶಿಸಿ ಕೆಲಸದ ಬಗ್ಗೆ ನೈಜ ಚಿತ್ರಣ ಪಡೆದು ವಿಭಾಗ ಮುಖ್ಯಸ್ಥರಿಂದ ಉಪಯುಕ್ತ ಮಾಹಿತಿಯನ್ನು ಪಡೆದರು. ಡೈರಿಯ ವಿವಿಧ ಉತ್ಪನ್ನಗಳ ಉತ್ಪಾದನಾ ವೆಚ್ಚ, ಗ್ರಾಹಕರಿಗೆ ನೀಡುವ ವಿವಿಧ ಗುಣಮಟ್ಟದ ಉತ್ಪನ್ನಗಳು, ಉತ್ಪನ್ನಗಳ ಸಂಸ್ಕರಣೆ, ಹಾಲಿನ ಬೈ-ಪ್ರೋಡಕ್ಟ್, ಸ್ಥಾವರದ ವಿವಿಧ ಯಂತ್ರೋಪಕರಣಗಳು, ಉತ್ಪಾದನೆಯನ್ನು ಮಾಡುವ ವಿಧಾನ ಮೊದಲಾದವುಗಳ ಮಾಹಿತಿಯನ್ನು ಪಡೆದರು.

ಕಾಲೇಜಿನ ಪ್ರಾಂಶುಪಾಲರಾದ ಡಾ| ನಿಕೇತನ ಅವರು ಕೈಗಾರಿಕಾ ಭೇಟಿಯ ಮಹತ್ವವನ್ನು ವಿವರಿಸಿ ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.

ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ದಿನೇಶ್ ಎಂ. ಕೈಗಾರಿಕಾ ಭೇಟಿಯನ್ನು ಆಯೋಜಿಸಿ ಮೇಲುಸ್ತುವಾರಿ ವಹಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರೊ| ಅನಿಲ್ ಕುಮಾರ್ ಹಾಗೂ ಉಪನ್ಯಾಸಕರಾದ ಅನುಷ, ಸುಪ್ರೀತಾ ಮತ್ತು ಲತಾ ಕೈಗಾರಿಕಾ ಭೇಟಿಗೆ ಸಹಕರಿಸಿದರು.