ಹೆಬ್ರಿ : ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಕೊರೊನಾ ಸಂಕಷ್ಟದಲ್ಲಿ ಜನರು ಇರುವಾಗ ಪೆಟ್ರೋಲ್ ಡಿಸೇಲ್ ಬೆಲೆಯನ್ನು ಇಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿಗೆ ಹೆಬ್ರಿ ತಾಲ್ಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಅತೀ ಕಡಿಮೆ ಇದೆ, ಕೊರೊನಾ ಸಮಸ್ಯೆಯಲ್ಲಿ ಜನರ ಸಂಚಾರ ಕಡಿಮೆ ಇದೆ. ತೈಲ ಬಳಕೆಯೂ ಕಡಿಮೆಯಾಗಿದೆ.ಹಾಗಾಗಿ ಬೆಲೆ ಕಡಿಮೆಯಾಗಬೇಕಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇನ್ನೂ ಬೆಲೆ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು. ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್ ಮೇಲಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಜನಾಧ೯ನ್, ಮುಖಂಡ ಸೀತಾನದಿ ರಮೇಶ ಹೆಗ್ಡೆ,ನವೀನ್ ದೇವಾಡಿಗ ಕಾಕ೯ಳ, ರವಿಶಂಕರ್ ಶೇರಿಗಾರ್, ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ, ಶಶಿಕಲಾ ಆರ್.ಪಿ, ಅಶೋಕ್ ಕುಮಾರ್ ದೊಂಡೆರಂಗಡಿ, ಜಗದೀಶ ಹೆಗ್ಡೆ ಕಡ್ತಲ, ಸುಂದರ ಶೆಟ್ಟಿಗಾರ್ ದೊಂಡೆರಂಗಡಿ,ಕೃಷ್ಣ ನಾಯ್ಕ್ ಮತ್ತಿತರರು ಇದ್ದರು.