ಕೊಂಕಣಿ ವಾರ್ಷಿಕ ಹಬ್ಬ -2018

By Press Release

ದಿನಾಂಕ 9.03.2019 ರಂದ ಬೆಳಿಗ್ಗೆ 10 ರಿಂದ ದಾಂಡೇಲಿಯ ರಂಗನಾಥ ಆಡಿಟೋರಿಯಂನಲ್ಲಿ ಕೊಂಕಣಿ ಅಕಾಡೆಮಿಯ 2018 ನೇ ಸಾಲಿನ ವಾರ್ಷಿಕ ಹಬ್ಬವನ್ನು ಆಯೋಜಿಸಲಾಗಿದೆ. ದಾಂಡೇಲಿಯ ಸಂತ ಅಂತೋನಿ ಚರ್ಚ್‍ನ ಧರ್ಮಗುರುಗಳಾದ ರೆ| ಪಾ| ಇಗ್ನೇಶಿಯಸ್ ಡಿಸೋಜಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿರುವರು. ಸಾಹಿತಿಗಳಾದ ಶ್ರೀ ಎಂ ಜೆ ಜನ್ನು , ವೆಸ್ಟ್‍ಕೋಸ್ಟ್ ಪೇಪರ್ ಮಿಲ್ಸ್‍ನ ಪಿಆರ್‍ಒ ಶ್ರೀ ರಾಜೇಶ ತಿವಾರಿ, ದಾಂಡೇಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಎನ್ ವಾಸರೆ, ದಾಂಡೇಲಿ ಪೌರಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಶ್ರೀ ಹರೀಶ ನಾಯ್ಕ್, ಕರ್ನಾಟಕ ನವಾಯತ್ ಸಂಘದ ಜನರಲ್ ಸೆಕ್ರೆಟರಿ ಶ್ರೀ ನಸ್ರುಲ್ಲಾ ಸಿದ್ಧಿ ಮಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಪೈಯನೂರ್ ರಮೇಶ ಪೈಯವರ ಅಧ್ಯಕ್ಷತೆಯಲ್ಲಿ ಕೊಂಕಣಿ ಭಾಷೆ ಸಾಹಿತ್ಯತ ಇಂದಿನ ಸ್ಥಿತಿಗತಿ ಕುರಿತಂತೆ ವಿಚಾರ ಗೋಷ್ಠಿ ನಡೆಯಲಿದೆ. ಶ್ರೀ ಉದಯಕಾಂತ ಅಣವೇಕರ ಅಧ್ಯಕ್ಷತೆಯಲ್ಲಿ ಕೊಂಕಣಿ ಕವಿಗೋಷ್ಠಿ ನಡೆಯಲಿದೆ. ಮದ್ಯಾಹ್ನ 1 ರಿಂದ ವಿವಿಧ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ 3 ರಿಂದ ಶ್ರೀ ವೆಂಕಟೇಶ ಬಾಳಿಗಾ ಅಧ್ಯಕ್ಷತೆಯಲ್ಲಿ ‘ಮಾದ್ಯಮದಲ್ಲಿ ಕೊಂಕಣಿ ಭಾಷೆಯ ಪ್ರಸ್ತುತ ಸ್ಥಿತಿಗತಿ’ ಕುರಿತಂತೆ ವಿಚಾರಗೋಷ್ಠಿ ನಡೆಯಲಿದೆ. ಸಂಜೆ 5 ಗಂಟೆಗೆ ಸರಿಯಾಗಿ ಕೊಂಕಣಿ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ವಿನ್ನಿ ಪೆರ್ನಾಂಡಿಸ್, ಸಾಹಿತ್ಯ ಕ್ಷೇತ್ರದ ಸಾಧಕರಾದ ಶ್ರೀ ಡಾ. ಚೇತನ್ ಎಸ್ ನಾಯಕ್, ಜಾನಪದ ಕ್ಷೇತ್ರದ ಸಾಧಕರಾದಾ ಶ್ರೀ ಚೇಂಪಿ ರಾಮಚಂದ್ರ ಭಟ್ ಇವರಿಗೆ ಕೊಂಕಣಿ ಕಿರೀಟ ಗೌರವ ನೀಡಿ ಸನ್ಮಾನಿಸಲಾಗುವುದು ಹಾಗೂ ಕೊಂಕಣಿ ವಿವಿಧ ರಂಗದಲ್ಲಿ ಸಾಧನೆಗೈದ ಹತ್ತುಮಂದಿ ಸಾಧಕರನ್ನು ಸನ್ಮಾನಿಸಲಾಗುವುದು.