ಹಬ್ಬಎಂದಾಕ್ಷಣ ಎಲ್ಲರ ಮನದಲ್ಲೂ ಸಂತೋಷ, ಸಡಗರ,ಸಂಭ್ರಮ ಮಕ್ಕಳಿಗಂತೂ ಖುಷಿಯೋ ಖುಷಿ ಹಾಗೆಯೇ ಎಲ್ಲಾ ಧರ್ಮದವರಿಗೂ ಅವರದ್ದೇ ಆದ ಧಾರ್ಮಿಕ ಹಬ್ಬಗಳು ಇವೆ. ಹಾಗದರೇ ಈಗ ನಾವು ಕ್ರೈಸ್ತ ರ  ಧಾರ್ಮಿಕ ಹಬ್ಬವಾದ ಕ್ರಿಸ್ಮಸ್ ಬಗ್ಗೆ ತಿಳಿದುಕೊಳ್ಳುವ.

ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಧರ್ಮದವರು ಆಚರಿಸುತ್ತಾರೆ. ಈ ದಿನವನ್ನು ಅವರು ಯೇಸುವಿನ ಜನ್ಮ ದಿನವನ್ನಾಗಿ ಆಚರಿಸುತ್ತಾರೆ. ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ಪುರಾಣಗಳಲ್ಲಿ ಯೇಸು ಕ್ರಿಸ್ತನನ್ನು "ಮೆಸ್ಸಿಹ್" ಎಂದು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಸಂತೋಷ ಮತ್ತು ಉತ್ಸಾಹದಿಂದ  ಆಚರಿಸುತ್ತಾರೆ. ಹಬ್ಬದಂದು ಪರಸ್ಪರ ಹಾರೈಸುತ್ತೇವೆ ಕೇಕ್ ಮತ್ತು ಹಲವಾರು ಸಿಹಿ ತಿಂಡಿಗಳನ್ನು ಇತರರಿಗೆ ಹಂಚಿ ಖುಷಿ ಪಡುತ್ತೇವೆ ಹಾಗೂ ಉಡುಗೊರೆಗಳನ್ನು ಹಂಚಿಕೊಳ್ಳುತ್ತೇವೆ. ಮನೆಯಲ್ಲೇ ಸುಂದರವಾದ ಕ್ರಿಸ್ಮಸ್‌ ಗಿಡವನ್ನು ಅಲಂಕರಿಸಲಾಗುತ್ತದೆ ಹಾಗೂ ಎಲ್ಲರ ಮನೆಯಲ್ಲೂ ಸ್ಟಾರ್‌ ಕಟ್ಟಿರುತ್ತಾರೆ. ಕ್ರಿಸ್ಮಸ್‌ ಗಿಡವನ್ನು ಸಂತೋಷದ ಸಂಕೇತ ಎಂದು  ಪರಿಗಣಿಸಲಾಗುತ್ತದೆ.

ಇತಿಹಾಸ:

ಕ್ರಿಸ್ಮಸ್ ಹಬ್ಬದ ಇತಿಹಾಸವು ಅತ್ಯಂತ ಪ್ರಾಚೀನವಾದ ಇತಿಹಾಸವನ್ನು ಒಳಗೊಂಡಿದೆ. ಕ್ರಿಸ್ಮಸ್ ಎಂಬ ಪದವು ಕ್ರಿಸ್ತನಿಂದ ಹುಟ್ಟಿಕೊಂಡಿದೆ ಎಂಬ ನಂಬಿಕೆಯಿದೆ. ಯೇಸು ಪ್ರಪಂಚದಲ್ಲಿ ಮನುಷ್ಯನಾಗಿ ಜನಿಸಿ ಎಲ್ಲಾ ಮನುಷ್ಯರನ್ನು ದೇವರತ್ತ ಕರೆದುಕೊಂಡು ಹೋಗುವುದಕ್ಕೆ ಬಂದಂತಹ ಅದ್ಭುತ ದಿನ. ಕ್ರಿ.ಶ 336 ರಲ್ಲಿ ರೋಮ್ ನಲ್ಲಿ ವಿಶ್ವದ ಮೊದಲ ಕ್ರಿಸ್ಮಸ್  ಹಬ್ಬವನ್ನು ಆಚರಿಸಲಾಯಿತು. ಹಾಗಾಗಿ ಡಿಸೆಂಬರ್ 25 ರಂದು ಯೇಸು ಕ್ರಿಸ್ತನ ಜನ್ಮ ದಿನವಾಗಿ ಆಚರಿಸುವುದು ಸಂಪ್ರದಾಯ.

ಕ್ರಿಸ್ತರ ಜನನ:

ಕರ್ತರಾದ ಯೇಸು ಜೋಸೆಫ್ ಮತ್ತು ಮರಿಯಮ್ಮಗೆ ಜನಿಸಿದರು. ಮರಿಯಮ್ಮನ ಕನಸಿನಲ್ಲಿ ದೇವದೂತನು ಬಂದು ನೀನು ಕರ್ತರಾದ ಯೇಸುವಿಗೆ ಜನ್ಮ ನೀಡಬೇಕೆಂಬ ಭವಿಷ್ಯವಾಣಿಯನ್ನು ಹೇಳಿದರು, ಭವಿಷ್ಯವಾಣಿಯ ಪ್ರಕಾರ ಮೇರಿ ಗರ್ಭವತಿಯಾದರು. ಗರ್ಭಾವಸ್ಥೆಯಲ್ಲಿ ಮೇರಿ ಬೇತ್ಲೆಹೇಮ್‌ಗೆ ಪ್ರಯಾಣಿಸಬೇಕಾಗಿತ್ತು. ಅವರು ಹೊರಟಾಗ ಮಧ್ಯರಾತ್ರಿಯಾದ ಕಾರಣ ಅವರಿಗೆ ಮಾರ್ಗ ಮಧ್ಯೆಯಲ್ಲಿ ಉಳಿಯಲು ಯಾವುದೇ ಸ್ಥಳ ಸಿಗುವುದಿಲ್ಲ. ನಂತರ ಕುರುಬನ ಮನೆಯೊಂದನ್ನು ಕಾಣುತ್ತಾರೆ. ನಂತರ ದನದ ಕೊಟ್ಟಿಗೆಯಲ್ಲಿ ಯೇಸು ಕ್ರಿಸ್ತರ ಜನನವಾಯಿತು.

ಸಂತಕ್ಲಾಸ್:

ಕ್ರಿಸ್ಮಸ್ ಹಬ್ಬದಲ್ಲಿ ಮಕ್ಕಳು ಹೆಚ್ಚಾಗಿ ಇಷ್ಟ ಪಡುವುದು ಸಂತಕ್ಲಾಸ್. ಸಂತಕ್ಲಾಸ್‌ ಅವರ ನಿಜವಾದ ಹೆಸರು "ಸಂತ ನಿಕೋಲಸ್" ಪುರಾಣಗಳ ಪ್ರಕಾರ ಅವರು ಯೇಸುಕ್ರಿಸ್ತರ ಮರಣದ ಸುಮಾರು 280 ವರ್ಷಗಳ ನಂತರ ಮೈರಾದಲ್ಲಿ ಜನಿಸಿದರು. ಅವರು ಕರ್ತ ಯೇಸುವಿನ ಭಕ್ತರಾಗಿದ್ದರು. ಯೇಸುವಿನ ಜನನ ದಿನದಂದು ಸಂತಕ್ಲಾಸ್‌ ರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಿದ್ದರು. ಕ್ರಿಸ್ ಮಸ್ ಹಬ್ಬವನ್ನು 12 ದಿನಗಳವರೆಗೆ ಆಚರಿಸಲಾಗುತ್ತದೆ.

Article By

ಜೋಶಲ್ ಫೆರ್ನಾಂಡಿಸ್

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಮಂಗಳೂರು