ಬ್ರಹ್ಮಶ್ರೀ ನಾರಾಯಾಣ ಗುರುಗಳ ಸ್ತಬ್ಧ ಚಿತ್ರ- ಗಣರಾಜ್ಯೋತ್ಸವ ಪೇರೆಡ್‍ನಲ್ಲಿ ಪ್ರದರ್ಶನಕ್ಕೆ ನಿರಾಕರಣೆ ಬಗ್ಗೆ, ಸುಳ್ಳು ಹೇಳಿಕೆಯನ್ನು ಸಮರ್ಥನೆ ಮಾಡುತ್ತಿರುವ ರಾಜ್ಯ ಸರಕಾರದ ಮಂತ್ರಿ ಸುನಿಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ್ ಪೂಜಾರಿಯವರು ಕೂಡಲೇ ರಾಜೀನಾಮೆ ನೀಡಬೇಕು ಬ್ರಹ್ಮಶ್ರೀ ನಾರಾಯಾಣ ಗುರುರವರ ತತ್ವ ಸಿದ್ಧಾಂತದ ಮೇಲೆ ನಂಬಿಕೆಯಿಲ್ಲ ಎಂಬುದು ಸ್ಪಷ್ಟಪಡಿಸಿದ ಇವರುಗಳು . ಬ್ರಹ್ಮಶ್ರೀ ನಾರಾಯಾಣ ಗುರುಗಳ ಮೂರ್ತಿಯನ್ನು ತೆಗೆದು ಶಂಕರಾಚಾರ್ಯರವರ ಮೂರ್ತಿಯನ್ನು ಅಳವಡಿಸಲು ಕೇಂದ್ರ ಸರಕಾರದ ಟ್ಯಾಬ್ಲೊ ಸಮಿತಿ ಸೂಚಿಸಿದ್ದು, ಯಾವ ಉದ್ದೇಶಕ್ಕಾಗಿ ಎಂಬುವುದನ್ನು ಕೇಂದ್ರ ಸರಕಾರದ ರಕ್ಷಣಾ ಸಚಿವಾಲಯಕ್ಕೆ ಪ್ರಶ್ನೆ ಮಾಡಿ, ಅಲ್ಲಿ ಉಂಟಾದ ಲೋಪವನ್ನು ಸರಿಪಡಿಸುವ ಬದಲು ರಾಜ್ಯಾದ್ಯಾದಂತ ಸುಳ್ಳು ಹೇಳಿ, ಸಮರ್ಥನೆ ಮಾಡುತ್ತಿರುವುದು ತೀರಾ ಖಂಡನೀಯ. ಮಹಿಳಾ ಸಬಲೀಕರಣಕ್ಕಾಗಿ ಹೆಚ್ಚು ಒತ್ತು ನೀಡಿ ಹೋರಾಟ ನಡೆಸಿದ ಬ್ರಹ್ಮಶ್ರೀ ನಾರಾಯಾಣ ಗುರುಗಳ ಬಗ್ಗೆ ತಯಾರಿಸಿದ ಟ್ಯಾಬ್ಲೊ ಉತ್ತಮವಾಗಿದೆ ಎಂದು ಸಮಿತಿ ಹೇಳಿಕೊಂಡಿದ್ದರೂ, ಆ ಟ್ಯಾಬ್ಲೊದಲ್ಲಿ ಇದ್ದ ಬ್ರಹ್ಮಶ್ರೀ ನಾರಾಯಾಣ ಗುರುಗಳ ಮೂರ್ತಿಯನ್ನು ಬದಲಾಯಿಸಿ, ಶಂಕರಾಚಾರ್ಯರವರ ಮೂರ್ತಿಯನ್ನು ಹಾಕುವಂತೆ ಅಧಿಕಾರಿಶಾಹಿಗಳು ನಿರ್ದೇಶನ ನೀಡಿದ್ದರ ಹಿಂದೆ ಇರುವ ಷಡ್ಯಂತರವನ್ನು ಸಚಿವರುಗಳು ಬಯಲುಗೊಳಿಸಬೇಕು ಮತ್ತು ಅದನ್ನು ಸರಿಪಡಿಸಿ, ಅನುಷ್ಠಾನಗೊಳಿಸುವುದರ ಬೇಕೆ ಹೊರತು ಅದನ್ನು ಸಮರ್ಥಿಸುವ ಮೂಲಕ ಬ್ರಹ್ಮಶ್ರೀ ನಾರಾಯಾಣ ಗುರುಗಳ ಅನುಯಾಯಿಗಳಿಗೆ, ಪ್ರಪಂಚದ್ಯಾದಂತ ಇರುವ ಸಮಸ್ತರಿಗೆ ನೋವು ಉಂಟಾಗಿರುವುದನ್ನು ಪ್ರತಿಭಟಿಸಿದರೆ, ಅದನ್ನು ರಾಜಕೀಯ ಷಡ್ಯಂತರ ಎಂದು ಟೀಕಿಸುವ ಮಂತ್ರಿಗಳಿಗೆ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಬ್ರಹ್ಮಶ್ರೀ ನಾರಾಯಾಣ ಗುರುಗಳ ಹೆಸರು ಬಳಸಿ, ಅವರ ಅನುಯಾಯಿಗಳ ಸಿದ್ಧಾಂತದ ಪ್ರಯೋಜನ ಪಡೆದು, ಮಂತ್ರಿಗಳು ಆಗಿರುವ ನಿಮಗೆ “ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಅಸಮರ್ಥರಾದ ನೀವುಗಳು ಮಂತ್ರಿ ಸ್ಥಾನದಲ್ಲಿರಲು ಯೋಗ್ಯರಲ್ಲ, ಕೂಡಲೇ ರಾಜೀನಾಮೆ ನೀಡಿ, ಬ್ರಹ್ಮಶ್ರೀ ನಾರಾಯಾಣ ಗುರುಗಳ ಪರವಾಗಿ ನಿಲ್ಲಿ” ಎಂದು ಮಾಜಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರು ಪತ್ರಿಕಾ ಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ.
ರಾಜ್ಯದ ಕನ್ನಡ ಮತ್ತು ಸಂಸ್ಕೃತ ಸಚಿವರಾದ ಸುನಿಲ್ ಕುಮಾರ್ ಇವರು ಜನರಿಗೆ ಸುಳ್ಳು ಹೇಳಿ, ಬ್ರಹ್ಮಶ್ರೀ ನಾರಾಯಾಣ ಗುರುಗಳನ್ನು ಅವಮಾನಿಸುತ್ತಿರುವುದು ಖೇದಕರ. ಬದಲಾಗಿ ರಕ್ಷಣ ಸಚಿವರುಗಳ ಬಳಿ ಉಂಟಾದ ತಪ್ಪನ್ನು ಸರಿಪಡಿಸಲು ಧೈರ್ಯ ವಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.
ಕರ್ನಾಟಕದಲ್ಲಿ 13 ವರ್ಷಗಳಿಂದ ನಿರಂತರವಾಗಿ ರಾಜ್ಯದ ಟ್ಯಾಬ್ಲೊ, ಗಣರಾಜ್ಯೋತ್ಸವದ ಪೇರೆಡಿನಲ್ಲಿ ಭಾಗವಹಿಸುತ್ತಿದೆ. ರಾಜ್ಯದ ಸಚಿವರುಗಳು ಒಂದೊಂದು ಹೇಳಿಕೆ ನೀಡುವ ಮೂಲಕ ಸುಳ್ಳು ಹೇಳಿ, ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅದರ ಬದಲು ಉಂಟಾದ ತಪ್ಪನ್ನು ಸರಿಪಡಿಸಿ, ಗಣರಾಜ್ಯೋತ್ಸವದ ಟ್ಯಾಬ್ಲೊನಲ್ಲಿ ಬ್ರಹ್ಮಶ್ರೀ ನಾರಾಯಾಣ ಗುರುಗಳ ಸ್ತಬ್ಧ ಚಿತ್ರದ ಟ್ಯಾಬ್ಲೊವನ್ನು ಪ್ರದರ್ಶಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. 25 ಮಂದಿ ಲೋಕಸಭಾ ಸದಸ್ಯರುಗಳು, ಕೇಂದ್ರದ ಮಂತ್ರಿಗಳು ಮತ್ತು ರಾಜ್ಯ ಸರಕಾರ ಬಿಜೆಪಿ ಇದ್ದು, ಬ್ರಹ್ಮಶ್ರೀ ನಾರಾಯಾಣ ಗುರುಗಳಿಗೆ ಅವಮಾನ ಆದಾಗ, ಅದನ್ನು ಸರಿಪಡಿಸುವ ರಾಜಕೀಯ ಇಚ್ಛಾಸಕ್ತಿ ಇಲ್ಲದ ಸರಕಾರವು ಯಾವ ಪುರುಷಾರ್ಥಾಕ್ಕಾಗಿ? ಬದಲಾಗಿ, ಜನಗಳ ಮಧ್ಯದಲ್ಲಿ ದ್ವೇಷ ಹೆಚ್ಚಿಸಲು ಬ್ರಹ್ಮಶ್ರೀ ನಾರಾಯಾಣ ಗುರುಗಳ ತತ್ವಗಳಿಗೆ ಸೈತಾಂತಿಕವಾಗಿ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾಯುತ್ತಿದೆ ಎಂದು ಶ್ರೀ ಐವನ್ ಡಿ ಸೋಜರವರು ತಿಳಿಸಿದ್ದಾರೆ.
ತಮಿಳುನಾಡು ರಾಜ್ಯದ ಮಾದರಿ:- ತಮಿಳುನಾಡು ಸರಕಾರ ರಾಜ್ಯದ ಕಳುಹಿಸಿದ ಟ್ಯಾಬ್ಲೊ, ಕೇಂದ್ರ ರಕ್ಷಣಾ ಇಲಾಖೆ ನಿರಾಕರಿಸಿದ್ದಕ್ಕಾಗಿ, ಆ ರಾಜ್ಯದಲ್ಲಿ ಜನರ ಭಾವನೆಗಳಿಗೆ ಸ್ಪಂದಿಸಲು ನಿರಾಕರಣೆ ಮಾಡಿದ ಟ್ಯಾಬ್ಲೊವನ್ನು, ಗಣರಾಜ್ಯೋತ್ಸವದಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಂಡಿದೆ. ಕನಿಷ್ಠ ಪಕ್ಷ ಆ ಕ್ರಮವನ್ನಾದರೂ ಮಾಡಲು ರಾಜ್ಯ ಸರಕಾರ ಕೂಡಲೇ ಆದೇಶ ಹೊರಡಿಸಿ, ಬ್ರಹ್ಮಶ್ರೀ ನಾರಾಯಾಣ ಗುರುಗಳ ಟ್ಯಾಬ್ಲೊವನ್ನು ಕೇಂದ್ರ ಸರಕಾರದ ಗಣರಾಜ್ಯೋತ್ಸವ ಪೇರೆಡ್‍ನಲ್ಲಿ, ಅದೇ ರೀತಿ ರಾಜ್ಯ ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಗಣರಾಜ್ಯೋತ್ಸವದಲ್ಲಿ ಟ್ಯಾಬ್ಲೊವನ್ನು ವಿಶೇಷವಾಗಿ ತಯಾರಿಸಿ, ಬ್ರಹ್ಮಶ್ರೀ ನಾರಾಯಾಣ ಗುರುಗಳಿಗೆ ಮತ್ತು ಅವರ ಸಿದ್ಥಾಂತಕ್ಕೆ ಗೌರವ ಸೂಚಿಸುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಾರಾಯಾಣ ಗುರುಗಳಿಗೆ ಆದ ಅನ್ಯಾಯವನ್ನು ಖಂಡಿಸಿ, ಮತ್ತು ಅದನ್ನು ಸರಿಪಡಿಸಲು ಒತ್ತಾಯಿಸಿ, ರಾಜ್ಯಾದ್ಯಾದಂತ ಹೋರಾಟ ನಡೆಸುವರು ಅಲ್ಲದೆ ದ.ಕ ಜಿಲ್ಲೆಯಲ್ಲಿ ಗಣರಾಜ್ಯೋತ್ಸವದಂದು ಜಿಲ್ಲೆಯ ಎಲ್ಲಾ ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ರಹ್ಮಶ್ರೀ ನಾರಾಯಾಣ ಗುರುಗಳ ಸ್ತಬ್ಧ ಚಿತ್ರದ ಮೆರವಣಿಗೆ ನಡೆಸಲು ಜಿಲ್ಲಾ ಕಾಂಗ್ರೆಸ್ ಕ್ರಮ ಕೈಗೊಂಡಿದೆ. ಬ್ರಹ್ಮಶ್ರೀ ನಾರಾಯಾಣ
ಗುರುಗಳಿಗೆ ಆದ ಅಪಮಾನವನ್ನು ದೇಶದ ಪ್ರತಿಯೊಬ್ಬ ಪ್ರಜೆಗಳು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಸುಳ್ಳು ಹೇಳಿಕೆಗಳನ್ನು ನೀಡಿ, ಜನರನ್ನು ನಂಬಿಸಲು ಹೊರಟಿದೆ.
ಶಿರಾಡಿ ಘಾಟ್ ರಸ್ತೆಯನ್ನು ಮುಚ್ಚುವ ತೀರ್ಮಾನಕ್ಕೆ ವಿರೋಧ: ಶಿರಾಡಿ ಘಾಟ್ ರಸ್ತೆಯು ಕರಾವಳಿ ಜಿಲ್ಲೆಗಳ ಸಂಪರ್ಕದ ಕೊಂಡಿಯಾಗಿದ್ದು, ದ್ವಿಪತ ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡುವ ಸಂದರ್ಭದಲ್ಲಿ ಸಂಪೂರ್ಣವಾಗಿ ಮುಚ್ಚುವ ಅಗತ್ಯವಿರುವುದಿಲ್ಲ. ಕಾಮಾಗಾರಿ ಕೈಗೊಳ್ಳುವ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕವೇ ಕಾಮಾಗಾರಿ ಕೈಗೆತ್ತುಗೊಳ್ಳಬೇಕು. ಈ ಹಿಂದೆ ಈ ರಸ್ತೆಯ ಅಭಿವೃದ್ಧಿಗಾಗಿ ಮತ್ತು ನಾಲ್ಕು ಪಥದ ರಸ್ತೆಯನ್ನಾಗಿ ಮಾಡಬೇಕೆನ್ನುವ ಉದ್ದೇಶ ಸಿದ್ಧರಾಮಯ್ಯ ಸರಕಾರದ ತದನಂತರ ಸಮಿಶ್ರ ಸರಕಾರ, ಕೇಂದ್ರ ಸರಕಾರಕ್ಕೆ ನೀಡಿರುವ ಪ್ರಸ್ತಾವಣೆಯನ್ನು ಒಪ್ಪಿ, ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಿರುವುದು ಸ್ವಾಗತಿಸುವ ಮೂಲಕ ಕಾಮಾಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಆಧುನಿಕ ತಂತ್ರಜ್ಞಾನ ಬಳಸಿ, ಕಾಮಾಗಾರಿಯನ್ನು ಕೈಗೊಳ್ಳಬೇಕಾಗಿದೆ. ಅದೇ ಸಂದರ್ಭದಲ್ಲಿ ಸಂಚಾರಕ್ಕೂ ಅನುವು ಮಾಡಿಕೊಡಬೇಕಾಗಿದ್ದು, ಶಿರಾಡಿ ಘಾಟ್‍ನಲ್ಲಿ ಸುರಂಗ ಮಾರ್ಗ ನಿರ್ಮಿಸುವ ಬಗ್ಗೆ 2017ರಲ್ಲಿಯೇ ಸುಮಾರು 14ಸಾವಿರ ಕೋಟಿ ಪ್ರಸ್ತಾವಣೆ ನೀಡಿದ್ದು, ಇನ್ನೂ ಕೇಂದ್ರ ಸರಕಾರ ಮಿನಾಮೇಷ ಮಾಡಿಕೊಂಡಿದ್ದು, ಅಧ್ಯಯನ ನಡೆಸದೇ ಮುಂದಕ್ಕೆ ಹಾಕುತ್ತಿರುವುದು ಖಂಡನೀಯ. ಪದೇ ಪದೇ ಗುಡ್ಡೆ ಕುಸಿತ ಮತ್ತು ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುರಂಗ ಮಾರ್ಗ ಒಂದು ಅತ್ಯುತ್ತಮ ಪ್ರಸ್ತಾವನೆಯಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಐವನ್ ಡಿ ಸೋಜರವರು ವಿನಂತಿಸಿದ್ದಾರೆ.
ದ.ಕ ಮತ್ತು ಉಡುಪಿ ಜಿಲ್ಲೆಯ ಸಂಸದರು ಮತ್ತು ಎಲ್ಲಾ ಚುನಾಯಿತ ಸದಸ್ಯರುಗಳು ಈ ಬಗ್ಗೆ ಕೂಡಲೇ ಸಭೆ ನಡೆಸಿ, ಶಿರಾಡಿ ಘಾಟ್ ಮುಚ್ಚುವ ಪ್ರಸ್ತಾವನೆಗೆ ವಿರೋಧ ಸೂಚಿಸಬೆಕು. ಹಾಸನ-ಮಾರನ ಹಳ್ಳಿ 4 ಪಥದ ರಸ್ತೆಗಳಲ್ಲಿ ಶಿರಾಡಿ ಘಾಟ್ ಬಂದ್ ಮಾಡಿರುವುದು ತೀರಾ ಅನ್ಯಾಯದ ಪರಮಾವಧಿ. ಶಿರಾಢಿ ಘಾಟಿನಲ್ಲಿ 26 ಕಿ.ಮೀಗಳ ಕಾಂಕ್ರೀಟಿಕರಣ ರಸ್ತೆಯ ಸಂದರ್ಭದಲ್ಲಿ ಇದ್ದ ರಸ್ತೆಯಲ್ಲಿಯೇ ಕಾಂಕ್ರೀಟಿಕರಣ ಮಾಡಬೇಕಾದ ಅವಶ್ಯಕತೆ ಇತ್ತು. ಆದರೆ ಈಗಾಗಲೇ 2 ಪಥ ರಸ್ತೆ ಇರುವುದರಿಂದ ಶಿರಾಡಿ ಘಾಟ್ ಬಂದ್ ಮಾಡುವ ಯಾವ ಪ್ರಮೇಯ ಉದ್ಭವಿಸುವುದಿಲ್ಲ.
ವಾರಂತ್ಯ ಲಾಕ್‍ಡೌನ್ ನಿಷ್ಪ್ರಯೋಜಕವಾಗಿದ್ದು, ಇದನ್ನು ಕೂಡಲೇ ತೆಗೆದು ಹಾಕಬೇಕೆಂದು ಈ ಬಗ್ಗೆ ಕೂಡಲೇ ಸರಕಾರ ವೀಕ್ ಎಂಡ್ ಕರ್ಫ್ಯು ಜೊತೆಗೆ ಇತರ ಕೊವಿಡ್ ನಿಯಮಗಳಲ್ಲಿಯೂ ಸಡಿಲಿಕೆ ಮಾಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.