ದಕ್ಷಿಣ ಕನ್ನಡ ಜಿಲ್ಲೆಯ ಕೊನೆಯಂಚು ಸಂಪಾಜೆ ಮತ್ತು ತುಮಕೂರಿನ ಹಿರೆಹಳ್ಳಿಯಲ್ಲಿ ಎರಡು ಬಸ್ಸುಗಳು ಎರಡು ಕಾರುಗಳಿಗೆ ಗುದ್ದಿದ ಕಾರಣ ಗುರುತು ಪತ್ತೆಯಾಗದವರೂ ಸೇರಿ 11 ಮಂದಿ ದುರ್ಮರಣ ಹೊಂದಿದ್ದಾರೆ.

ಸಂಪಾಜೆಯಲ್ಲಿ ಸುಬ್ರಹ್ಮಣ್ಯದತ್ತ ಬರುತ್ತಿದ್ದ ಕಾರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಗುದ್ದಿದೆ. ಇದರಲ್ಲಿ ಕಾರು ಓಡಿಸುತ್ತಿದ್ದ ಮಳವಳ್ಳಿಯ 36ರ ಕುಮಾರ್, ಮಡದಿ 29ರ ಶೀಲಾ, ಒಂದೂವರೆ ವರುಷದ ಮಗಳು ಮಿಶಿಕಾ, ಸಂಬಂಧಿ 42ರ ಪ್ರಿಯಾಂಕ ಮಕ್ಕಳಾದ 8ರ ಮನಸ್ವಿ, 12ರ ಯಶಸ್ ಗೌಡ ಸಾವಿಗೀಡಾದರು.

ರಾಷ್ಟ್ರೀಯ ಹೆದ್ದಾರಿ 48ರ ಅವಘಡದಲ್ಲಿ ಬೆಂಗಳೂರಿನತ್ತ ಬರುತ್ತಿದ್ದ ಕಾರಿಗೆ ಕಾಸಗಿ ಬಸ್ಸು ಹಾದಿದೆ. 58ರ ಗೋವಿಂದ ನಾಯ್ಕ್, ಹೆಂಡತಿ 52ರ ತಿಪ್ಪಮ್ಮ ಸಹಿತ ಐದು ಜನ ಸಾವು ಕಂಡಿದ್ದಾರೆ. ಒಂದು ಮಗು ಮತ್ತೆ ಇಬ್ಬರು ಮಡಿದ ಹಿರಿಯರ ಗುರುತು ಪತ್ತೆಗೆ ಪೋಲೀಸರು ಪ್ರಯತ್ನಿಸುತ್ತಿದ್ದಾರೆ.