ಕಾಂಗ್ರೆಸ್, ಎಎಪಿ, ಟಿಎಂಸಿ, ಎನ್‌ಸಿಪಿ, ಡಿಎಂಕೆ, ಸಿಪಿಎಂ, ಉದ್ಧವ್ ಶಿವಸೇನೆ ಎಂದು 19 ಪಕ್ಷಗಳು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಲಿರುವ ಹೊಸ ಸಂಸತ್ ಭವನದ ಕಾರ್ಯಕ್ರಮವನ್ನು ಬಹಿಷ್ಕರಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಎಲ್ಲ ಪಕ್ಷಗಳಿಗೂ ಕ್ರಮ ಪ್ರಕಾರ ಮೇ 28ರ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರ ಕಳುಹಿಸಲಾಗಿದೆ ಎಂದು ಗೃಹ ಮಂತ್ರಿ ಅಮಿತ್ ಶಾ ತಿಳಿಸಿದ್ದಾರೆ.