ಲೇಖನ ರಾಯಿ ರಾಜ ಕುಮಾರ

ಕಾರ್ತಿಕ ಶುಕ್ಲ ಪಾಡ್ಯದಿಂದ ಆರಂಭಿಸಿ ಉತ್ಥಾನ ದ್ವಾದಶಿಯ ತನಕ ಪ್ರತಿ ದಿನ ಸಂಜೆ ವಿಶೇಷವಾಗಿ ತುಳಸಿ ಪೂಜೆಯನ್ನು ನಡೆಸಲಾಗುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿಗೆ ಕ್ಷೀರಾಭಿಷೇಕವನ್ನು ಮಾಡುವ ಮೂಲಕ ವಿಶೇಷ ತುಳಸಿ ಪೂಜೆಯನ್ನು ನಡೆಸುವ ಪದ್ಧತಿ ಇದೆ. ಈ ಪ್ರಕಾರ ತುಳಸಿ ಪೂಜೆಯನ್ನು ನಡೆಸುವುದರಿಂದ ದಾಂಪತ್ಯ ಹಾಗೂ ಆರೋಗ್ಯಕರ ಪ್ರಯೋಜನಗಳು ಇದೆ ಎಂದು ಹಲವಾರು ನಿದರ್ಶನಗಳು ಕಂಡುಬಂದಿವೆ. ತುಳಸಿಯನ್ನು ವಿಷ್ಣುವಿಗೆ ಬಹಳ ಪ್ರಿಯವಾದ ವಸ್ತು ಆಗಿರುವುದರಿಂದ ಅದನ್ನು 'ಹರಿಪ್ರಿಯಾ' ಎಂದು ಕರೆಯಲಾಗುತ್ತದೆ. ಈ ರೀತಿ ತುಳಸಿಯನ್ನು ವಿಷ್ಣುವಿಗೆ ಅರ್ಪಿಸುವುದರಿಂದ ಪಾಪಗಳು ದೂರವಾಗುತ್ತವೆ. ವೈವಾಹಿಕ ಜೀವನ ಸುಖಮಯವಾಗಿ ಸಂತೋಷ ಸಮೃದ್ಧಿಯಿಂದ ಕೂಡಿರುತ್ತದೆ.

ತುಳಸಿಯ ಸೇವನೆಯಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ಪ್ರತಿ ದಿನ ಅದರ ಎರಡು ಎಸಳುಗಳನ್ನು ಸೇವಿಸುವುದರಿಂದ ಸಾಕಷ್ಟು ಉತ್ತಮ ಪ್ರಯೋಜನ, ಕೆಮ್ಮು, ದಮ್ಮು,ಕಡಿಮೆ ಮಾಡಲಿದೆ. ಪ್ರತಿದಿನ ತುಳಸಿಯ ಪೂಜೆಯು ಮನೆಯ ಕೆಟ್ಟ ಶಕ್ತಿಗಳನ್ನು ದೂರ ಮಾಡಿ ವಾಸ್ತುದೋಷವನ್ನು ನಿವಾರಿಸುತ್ತದೆ ಎಂದು ತಿಳಿದು ಬಂದಿದೆ. ಆದುದರಿಂದ ಪ್ರತಿದಿನ ಮನೆಯ ಹೆಂಗಳೆಯರು ನೀರನ್ನು ತುಳಸಿಗೆ ಎರೆದು, ನಮಿಸಿ, ಶುಭ ಆಶೀರ್ವಾದವನ್ನು ಬೇಡುತ್ತಾರೆ.