ಮಂಗಳೂರು: ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಕೃತ ವರ್ಷದ ರ್ಯಾಂಕ್  ಪದಕ ಪಟ್ಟಿಯು ಬಿಡುಗೊಂಡಿದೆ. ಮಂಗಳಾ ಸಮೂಹ ವಿದ್ಯಾ ಸಂಸ್ಥೆಗಳ ಅಡ್ ಹೆಲ್ತ್ ಸಯನ್ಸ್ ಕಾಲೇಜು ವಿವಿದ ಕೋರ್ಸುಗಳಿಗೆ ಒಟ್ಟು 24 ರ್ಯಾಂಕ್ ಗಳನ್ನು ಪಡೆದುಕೊಂಡಿದೆ.

ವಾರ್ಷಿಕ ವಾಗಿ ಕೊಡಲ್ಪಡುವ ವಿವಿಧ ಕೋರ್ಸುಗಳಿಗೆ ಇರುವ ರ್ಯಾಂಕ್ ಗಳಲ್ಲಿ  ಸಂಗೀತ ಬಿಎಸ್ ಸಿ ಅನಸ್ಥೆಶಿಯಾದಲ್ಲಿ ಮೊದಲ ವರ್ಷದಲ್ಲಿ 9 ನೇ ರ್ಯಾಂಕ್  ಮತ್ತು ಮೂರನೇ ವರ್ಷದಲ್ಲಿ 10 ನೇ ರ್ಯಾಂಕ್ ನ್ನು ಪಡೆದಿರುತ್ತಾರೆ. ಮೊಹಮ್ಮದ್‌ ಅವರು ಬಿ ಎಸ್ ಸಿ ಅನಸ್ಟ್ರೇಶಿಯದಲ್ಲಿ ಎರಡನೇ ವರ್ಷದಲ್ಲಿ 8 ನೇ ರ್ಯಾಂಕ್ ನ್ನು ಪಡೆದಿದ್ದಾರೆ. ಧನ್ಯ ಸಿ ಎಚ್ ಇಮೇಜಿಂಗ್ ಟೆಕ್ನಲೊಜಿ ಪದವಿ ಪರೀಕ್ಷೆಯಲ್ಲಿ ಮೊದಲ ವರ್ಷದಲ್ಲಿ 1 ನೇ ರಾಂಕ್, 2 ನೇ ವರ್ಷದಲ್ಲಿ 2 ನೇ ರ್ಯಾಂಕ್ ನ್ನು ಗಳಿಸಿದ್ದಾರೆ. ಹಾಗೆಯೇ ಹೇಮಂತ್ ಕೆ ಯವರು ಒಂದನೇ ವರ್ಷದ ಲ್ಯಾಬ್ ಟೆಕ್ನಲೊಜಿಯಲ್ಲಿ 9 ನೇ ರ್ಯಾಂಕ್ ನ್ನು ಪಡೆದಿದ್ದಾರೆ.  ಜಯಶ್ರೀ ಆಪರೇಷನ್ ತಿಯೇಟರ್ ಟೆಕ್ನಲೊಜಿಯಲ್ಲಿ ಮೊದಲ ವರ್ಷದಲ್ಲಿ 6 ನೇ  ರ್ಯಾಂಕ್  ಮತ್ತು 3 ನೇ ವರ್ಷದಲ್ಲಿ 6 ನೇ ರ್ಯಾಂಕ್ ಗಳಿಸಿದ್ದಾರೆ.  ಗ್ರಹಿತಾರವರು  ಓ ಟಿ ಪದವಿಯಲ್ಲಿ 2ನೇ  ರ್ಯಾಂಕ್ ನ್ನು ಪಡೆದಿರುತ್ತಾರೆ.  ದೀಪ ಪದವಿ ಓಟಿಯಲ್ಲಿ 2 ನೇ ವರ್ಷದಲ್ಲಿ 10 ನೇ ರ್ಯಾಂಕ್ ಮತ್ತು 3 ನೇ ವರ್ಷದಲ್ಲಿ 9 ನೇ ರ್ಯಾಂಕ್  ಪಡೆದಿರುತ್ತಾರೆ. 3 ನೇ ವರ್ಷದ ಓಟಿ ಟೆಟ್ರೋಲೊಜಿಯಲ್ಲಿ  ಸಿಂಚನ ರವರು 1 ನೇ ರ್ಯಾಂಕ್ ಪಡೆದರು. 3 ನೆ ವರ್ಷದ ಪದವಿ ಓಟಿಯಲ್ಲಿ ನಿಧಿ ಎಸ್ ರವರು 7 ನೇ ರ್ಯಾಂಕ್ ನ್ನು ಗಳಿಸಿರುತ್ತಾರೆ.  ಸುಶ್ಮಿತಾ ಪದವಿ ಓಮ್ಮೊಮೆಟ್ರಿಯಲ್ಲಿ ಮೊದಲನೇ ವರ್ಷದಲ್ಲಿ 6 ನೆ ರ್ಯಾಂಕ್ ನ್ನು, 3 ನೇ ವರ್ಷದಲ್ಲಿ 3 ನೇ ರ್ಯಾಂಕ್ ನ್ನು ಪಡೆದರು. ರೀನಲ್ ಡಯಾಲಿಸಿಸ್ ನಲ್ಲಿ ಕ್ರಮವಾಗಿ ಮೊದಲನೇ ವರ್ಷದಲ್ಲಿ 8 ನೇ ರ್ಯಾಂಕ್ 3 ನೇ ವರ್ಶದಲ್ಲಿ 2 ನೇ ರ್ಯಾಂಕ್ ನ್ನು ಪಡೆದ  ಸುಶ್ಮಿತ ಪಡೆದರೆ, ಸ್ನೇಹಾ ಡಿ ರಾಜು 1 ನೇ ವರ್ಷದಲ್ಲಿ 8 ನೇ ರ್ಯಾಂಕ್  ಮತ್ತು 3 ನೇ ವರ್ಷದಲ್ಲಿ 2 ನೇ ರ್ಯಾಂಕ್  ನ್ನು ಪಡೆದರು. 3 ನೇ ವರ್ಷದಲ್ಲಿ 3 ನೇ ರ್ಯಾಂಕ್ ನ್ನು  ಸುಶ್ಮಿತ ಎಸ್ ರವರು ಪಡೆದರೆ  ಜೆಂಸಿ ಜೋರ್ಜ್‌ರವರು 3 ನೇ ವರ್ಷದಲ್ಲಿ 5 ನೇ ರ್ಯಾಂಕ್ ನ್ನು ಮತ್ತು  ಲೊರೆನಾ ರೇಷ್ಮಾ  ಡಿಕೋಸ್ಟ ರವರು 3 ನೇ ವರ್ಷದಲ್ಲಿ 5 ನೇ ರ್ಯಾಂಕ್  ನ್ನು ಪಡೆದರು.

ಒಟ್ಟು ನಾಲಕ್ಕು ರ್ಯಾಂಕ್ ಗಳನ್ನು ಸಮಗ್ರವಾಗಿ ಪಡೆದವರಲ್ಲಿ  ಸುಶ್ಮಿತ ಬಿ ಎಸ್ ಸಿ ಓಪ್ಲೋಮೆಟ್ರಿಯಲ್ಲಿ 3 ನೇ ರ್ಯಾಂಕ್ ನ್ನು  ಲೊರೆನಾ ರೇಷ್ಮಾ  ಡಿಕೋಸ್ಟ ರಿಗೆ ಪದವಿ ಡಯಾಲಿಸಿಸ್ ನಲ್ಲಿ 7 ನೇ ರ್ಯಾಂಕ್ ಮತ್ತು  ಗ್ರಹಿತ ಬಿ ಎಸ್ ಸಿ ಓಟಿ ಟಿಯಲ್ಲಿ 6 ನೇ ರ್ಯಾಂಕ್ ನ್ನು ಅಲ್ಲದೆ  ಧನ್ಯ ಸಿ ಹೆಚ್ ಪದವಿ ಇಮೇಜಿಂಗ್ ಟೆಕ್ನಲೊಜಿಯಲ್ಲಿ 10 ನೇ ರ್ಯಾಂಕ್ ನ್ನು ಪಡೆದರು.

ಈ ಎಲ್ಲಾ ಸಾಧನೆಗಳ ಮತ್ತು ಯಶಸ್ಸಿನ ಹಿಂದೆ ಕಾಲೇಜಿನ ಆಡಳಿತ ವರ್ಗದ ಶಿಕ್ಷಕರ ಅಲ್ಲದೆ ವಿದ್ಯಾರ್ಥಿಗಳ ಸತತ ಪ್ರಯತ್ನ ಮತ್ತು ಬದ್ದತೆಯ ಫಲವಾಗಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಗಣಪತಿ ಪಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಲಿಸಿರುತ್ತಾರೆ.