ಮಂಗಳೂರಿನ ಸಹ ಟೌನ್‌ ಹಾಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೋಯೋಭಿವೃದ್ಧಿ ಸಂಘದವರು ಮಂಗಳೂರು ಪುರ ಭವನದ ಸಹ ಹಾಲ್‌ನಲ್ಲಿ ರಕ್ರದಾನ ಶಿಬಿರ ಮತ್ತು 5ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿ ನಡೆಸಿದರು.

ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಆಂಡ್ ಎಜುಕೇಶನ್ ಸಂಸ್ಥೆಯ ಡಾ. ರೀಟಾ ನೊರೊನ್ಹಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಿ. ಕೆ. ಇಮ್ತಿಯಾಜ್ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಿಪಿಎಂನ ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.

ದೇಶದ ನಿಯಂತ್ರಣ ಮತ್ತು ಸಂಪತ್ತು ಒಂದು ಶೇಕಡಾ ಜನರ ಕೈಯಲ್ಲಿ ಸಿಕ್ಕಿದೆ. ಹಾಗಾಗಿ ಬೀದಿ ಬದಿ ವ್ಯಾಪಾರರಂಥ ಬಡವರ ಸಮಸ್ಯೆಗಳನ್ನು ಕೇಳುವವರಿಲ್ಲ. ಬದುಕುವ ಹಕ್ಕು ಬೀದಿ ಬದಿ ವ್ಯಾಪಾರದ ಮೂಲಕ ನಡೆದಿದೆ. ಬಡವರ ಹೊಟ್ಟೆಗೆ ಹೊಡೆಯುವವರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು  ಕಾರ್ಯಕ್ರಮದ ಯೋಜಕರು ಕರೆ ನೀಡಿದರು.