ದಿನಾಂಕ-23-06-2014 ರಲ್ಲಿ ವಿಧಾನ ಪರಿಷತ್ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ 6 ವರ್ಷ ಸಂದಿದೆ. ಈ 6 ವರ್ಷಗಳ ಅವಧಿಯಲ್ಲಿ ವಿಧಾನ ಪರಿಷತ್ತಿನಲ್ಲಿ ಸರಕಾರಿ ಮುಖ್ಯ ಸಚೇತಕನಾಗಿ ಮಾನ್ಯ  ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸರಕಾರದಲ್ಲಿ ಕಾರ್ಯನಿರ್ವಹಣೆ ಮಾಡಿದ್ದು, ತದನಂತರ 2018ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮಾನ್ಯ ಎಚ್ .ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ (ಕಂದಾಯ ಇಲಾಖೆ) ಕಾರ್ಯನಿರ್ವಹಿಸಿದ್ದಾರೆ.

   ಈ 6 ವರ್ಷಗಳ ಅವಧಿಯಲ್ಲಿ ಶೇಕಡಾ 100ರಷ್ಟು ಹಾಜಾರಾತಿಯನ್ನು ದಾಖಲಿಸಿ ದ್ದಾರೆ. ಇದು ಕೆಲವೇ ಶಾಸಕರುಗಳ ಪೈಕಿ ತಾನು ಒರ್ವ ಎಂದು ಹೇಳಲು ಸಂತೋಷ ಪಡುತ್ತಾರೆ. ಪ್ರತಿ ಅದಿವೇಶನದ ದಿನ ಒಂದಕ್ಕೆ 5 ಪ್ರಶ್ನೆ ಕೇಳುವ ಅವಕಾಶ ಇದ್ದು ಶೇಕಡಾ 100ರಷ್ಟು ಪ್ರಶ್ನೆಗೆಳನ್ನು ರಾಜ್ಯದ ಏಲ್ಲಾ ಇಲಾಖೆಗಳ ಅಭಿವೃದ್ದಿ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಅದರ ನ್ಯೂನತೆಗಳ ಬಗ್ಗೆ ಅದಿವೇಶನದಲ್ಲಿ ಪ್ರಶ್ನೆ ಕೇಳುವುದರ ಮುಖಾಂತರ ಸರಕಾರದ ಗಮನಕ್ಕೆ ತಂದು ಸರಕಾರವನ್ನು ಸ್ಪಂದಿಸುವಂತೆ ಮಾಡಿ ದ್ದಾರೆ. ಸದನದಲ್ಲಿ ಬೀಡಿ ಕಾರ್ಮಿಕರ ಬಗ್ಗೆ ಅಸಂಘಟಿತ ಕಾರ್ಮಿಕರ ಬಗ್ಗೆ ಗಮನ ಸೆಳೆದು ಸದನವೀರ ಪ್ರಶಸ್ತಿಯನ್ನು ಎಂಬ ಹೆಗ್ಗಳಿಕೆಗೆ ಪಾತ್ರ

  ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಮೇಲ್ಛಾವಣಿ ಘಟಕವನ್ನು ಅಳವಡಿಸುವ ಮೂಲಕ ವಿದ್ಯುತ್ ಉದ್ಪಾದನೆಗೆ ಹೆಚ್ಚು ಗಮನ ನೀಡಬೇಕೆಂದು ಸದನದಲ್ಲಿ ಪ್ರಸ್ತಾಪಿಸಿ ರಾಜ್ಯಾದಾದ್ಯಂತ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಬೇಕೆಂಬ ಯೋಜನೆ  ಜಾರಿಗೆ ತರುವಲ್ಲಿ ಐವನ್ ಡಿಸೋಜರವರ ಪಾತ್ರ ಮಹತ್ತರವಾದದ್ದು. ದ.ಕ. ಜಿಲ್ಲೆಯಲ್ಲಿ ಸೌರಶಕ್ತಿ ಮೇಲ್ಛಾವಣಿ ಘಟಕ ಅಭಿಯಾನವನ್ನು ಆರಂಭಿಸಿ, ರಾಜ್ಯದಲ್ಲಿ ಸೌರಶಕ್ತಿ ಉದ್ಪಾದನೆಯಲ್ಲಿ ರಾಜ್ಯದಲ್ಲಿಯೇ ದ.ಕ. ಜಿಲ್ಲೆಯು 2ನೇ ಸ್ಥಾನವನ್ನು ಪಡೆಯುವಲ್ಲಿ ಶ್ರಮವಹಿಸಿರುತ್ತಾರೆ ಶಾಸಕರ ನಿಧಿಯಿಂದ ಸರಕಾರಿ ಮತ್ತು ಅನುದಾನಿತ 25 ಶಾಲೆಗಳಿಗೆ  3 ಕಿ.ವ್ಯಾಟ್ ನ ಸೌರಶಕ್ತಿ ಘಟಕಗಳನ್ನು ಒದಗಿಸಿದ್ದಾರೆ, ಹಾಗೂ ಅನೇಕ ಪಂಚಾಯತ್‍ಗಳಿಗೂ ಸೌರಶಕ್ತಿ ಘಟಕಗಳನ್ನು ಒದಗಿಸಲಾಗಿದೆ. ಪೆರಾಬೆ ಎಂಡೋಸಲ್ಫಾನ್ ಪೀಡಿತರ ಮನೆಗಳಿಗೆ ಸೌರಶಕ್ತಿ ಬೆಳಕು ನೀಡುವ ಮೂಲಕ 60 ಮನೆಗಳಿಗೆ 2 ಲೈಟ್ 1 ಪ್ಯಾನ್ ಮತ್ತು ಮೊಬೈಲ್ ಚಾರ್ಜರ್ ಒದಗಿಸಿರುತ್ತಾರೆ.

ಅನುದಾನಗಳು:

     ಅಲ್ಪಸಂಖ್ಯಾತರ ಕಾಲನಿ ಅಭಿವೃದ್ದಿಗೆ 9 ಕೋಟಿ, ಪ್ರವಾಸೋಧ್ಯಮ ಇಲಾಖೆಗೆ 4 ಕೋಟಿ ನೀರಾವರಿ ಅಭಿವೃದ್ದಿ ನಿಗಮಕ್ಕೆ 7 ಕೋಟಿ, ಮಲೆನಾಡು ಅಭಿವೃದ್ದಿಗೆ 2 ಕೋಟಿ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜಗೆ 2 ಕೋಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರಕ್ಕೆ 4 ಕೋಟಿ,ಲೋಕೋಪಯೋಗಿ ಇಲಾಗೆ 8 ಕೋಟಿ, ಶಾಸಕರ ಪ್ರದೇಶಾಭೀವೃದ್ದಿ ನಿದಿಗೆ 10 ಕೋಟಿ, ಹೀಗೆ  ಒಟ್ಟು 46 ಕೋಟಿ ರೂಪಾಯಿಯಷ್ಟು ಅನುದಾನ ನೀಡಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿ:

      ಆರು ವರ್ಷದ ಅವಧಿಯಲ್ಲಿ  ಜಾತಿ-ಮತ-ಊರು ಪಕ್ಷ ನೋಡದೇ ಸುಮಾರು 1600ಕ್ಕೂ ಅಧಿಕ ಅರ್ಜಿದಾರರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಗರಿಷ್ಠ ಮಟ್ಟದ ಮೊತ್ತವನ್ನು ಒದಗಿಸಿಕೊಟ್ಟಿರುತ್ತಾರೆ. 2014-15 ರಲ್ಲಿ1.3 ಕೋಟಿ, 2015-16 ರಲ್ಲಿ 1.72ಕೋಟಿ, 2016-17 ರಲ್ಲಿ 1.7 ಕೋಟಿ, 2017-18 ರಲ್ಲಿ 0.75 ಕೋಟಿ, 2018-19 ರಲ್ಲಿ0.59 ಕೋಟಿ,2019-20 ರಲ್ಲಿ 0.56ಕೋಟಿ, ಹೀಗೆ  ಒಟ್ಟು6.62 ಕೋಟಿ ರೂಪಾಯಿಯಷ್ಟು ಮುಖ್ಯಮಂತ್ರಿ ಪರಿಹಾರ ನಿದಿಗೆ ಅನುದಾನ ನೀಡಿದ್ದಾರೆ.ತೀರಾ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಈ ಕಾರ್ಯವು ಇನ್ನೂ ಮುಂದುವರಿಯಲಿದ್ದು ತನ್ನ ಸ್ವಂತ ಗೃಹ ಕಛೇರಿಯಲ್ಲಿ  ಈ ಕಾರ್ಯಕ್ರಮವು ಮುಂದುವರಿಯಲಿದೆ ಎಂದು ತಿಳಿಸಬಯಸುತ್ತಾರೆ.

ಉಚಿತ ಮೆಡಿಕಲ್ ಕ್ಯಾಂಪ್‍ಗಳು

    ಮೇಲಿನ ಅವಧಿಯಲ್ಲಿ ಸುಮಾರು 63 ಉಚಿತ ಮೆಡಿಕಲ್ ಕ್ಯಾಂಪ್‍ಗಳನ್ನು 350ಕ್ಕೂ ಹೆಚ್ಚು ಉಚಿತ ಶಸ್ರ್ತಚಿಕಿತ್ಸೆ 6,000ಕ್ಕೂ ಅಧಿಕ ಮುಂದುವರಿದ ಚಿಕಿತ್ಸೆ ಮತ್ತು ಸಾವಿರಾರು ಜನರಿಗೆ ವೈದ್ಯಕೀಯ ನೆರವು 3,500ಕ್ಕೂ ಅಧಿಕ ಜನರಿಗೆ ಉಚಿತ ಕನ್ನಡಕವನ್ನು ತನ್ನ ಧರ್ಮಪತ್ನಿ ಡಾ.ಕವಿತಾ ಡಿ’ಸೋಜಾರವರ ಸಹಾಯದಿಂದ ಎ.ಜೆ. ಆಸ್ಪತ್ರೆ ಮೂಲಕ ಮಾಡಲಾಗಿದೆ. ಈ ಕಾರ್ಯವು ಇನ್ನೂ ಮುಂದುವರಿಯಲಿದೆ. ರಾಜ್ಯದಲ್ಲಿ ಮೊದಲು ಎಂಬಂತೆ ರಿಕ್ಷಾ ಚಾಲಕರುಗಳಿಗೆ ಸುಸಜ್ಜಿತವಾದ ರಿಕ್ಷಾ ತಂಗುದಾಣಗಳನ್ನು ಕರಾವಳಿ ಜಿಲ್ಲೆಯ ಉದ್ದಗಲಕ್ಕೂ ಸುಮಾರು 68 ನಿಲ್ದಾಣಗಳನ್ನು ನಿರ್ಮಿಸಿ ನೀಡಲಾಗಿದೆ.

     ಸರ್ವಧರ್ಮವನ್ನು ಒಗ್ಗೂಡಿಸುವ ದೃಷ್ಟಿಯಿಂದ ಕ್ರಿಸ್ಮಸ್, ದೀಪಾವಳಿ, ರಂಜಾನ್ ಹಬ್ಬಗಳನ್ನು ಸಮಾಜದ ಏಲ್ಲಾ ಧರ್ಮಗಳನ್ನು ಒಗ್ಗೂಡಿಸಿ ಸಂಭ್ರಮದಿಂದ ಆಚರಿಸಿದ್ದಾರೆ. ಪ್ರತಿಯೊಂದು ಧರ್ಮವನ್ನು ಗೌರವಿಸುವ ಮೂಲಕ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಯತ್ನ ಮಾಡಿದ್ದಾರೆ. ಕ್ರೈಸ್ತ ಸಮಾಜದ ಬೇಡಿಕೆಯಂತೆ “ಕ್ರೈಸ್ತ ಅಭಿವೃದ್ದಿ ನಿಗಮ” ಸ್ಥಾಪನೆಗೆ 2019-20ರ ಬಜೆಟ್‍ನಲ್ಲಿ 200ಕೋಟಿ ರೂ ಜೊತೆಗೆ ನಿಗಮ ಸ್ಥಾಪನೆಗೆ ಸರಕಾರ ಕ್ರಮ ಕೈಗೊಂಡಿದೆ. ಇದು ಒಂದು ಸುಮುದಾಯದ ಅಭಿವೃದ್ದಿಯಲ್ಲಿ ಮೈಲಿಗಲ್ಲು ಆಗಿದೆ. ಈ ಬಗ್ಗೆ ಸತತವಾಗಿ ಶಾಸನ ಸಭೆಯಲ್ಲಿ ಹೊರಗಡೆ ಸಹ ಹೋರಾಟವನ್ನು ನಡೆಸಿ, ಯಶಸ್ವಿಯಾಗಿದ್ದಾರೆ.

  ಆಧಾರ್ ಕಾರ್ಡ್ ನೊಂದಾವಣಿಗೆ 2 ತಿಂಗಳುಗಳ ಕಾಲ ಸತತವಾಗಿ ಜನರ ಬಳಿ ತೆರಳಿ ನೊಂದಾವಣಿ ಅಭಿಯಾನ ಮಾಡಲಾಗಿದ್ದು, ಸುಮಾರು 70 ಶಿಬಿರಗಳನ್ನು ಸಂಘಟಿಸಿ 8000ಕ್ಕೂ ಅಧಿಕ ಮಂದಿಗೆ ನೊಂದಾವಣಿ ಮಾಡಿ ನೀಡಲಾಗಿದೆ. ಅಡಿಕೆ ಬೆಳೆಗಾರರ ಅಭಿವೃದ್ದಿಗಾಗಿ ಅಡಿಕೆ ಅಭಿವೃದ್ದಿ ಮಂಡಳಿ ರಚಿಸಲು ಹೋರಾಟ ರಚಿಸಿ ಸಮಿತಿ ರಚನೆ ಮಾಡಿ ಸಮಿತಿಯು ಮಂಡಳಿ ರಚನೆಗೆ ಮಂಡಳಿಯು ಹಸಿರು ನಿಶಾನೆ ನೀಡುವಲ್ಲಿ ಸಫಲರಾಗಿರುತ್ತಾರೆ.

    ರಾಜ್ಯ ಸರ್ಕಾರದ ಪರವಾಗಿ ಚೀನಾ ದೇಶದಲ್ಲಿ ಪ್ರವಾಸ ನಡೆಸಿ ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಮತ್ತು ರಾಜ್ಯದ ಅಭಿವೃದ್ದಿ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ರಾಜ್ಯದ ಬಗ್ಗೆ ಗಮನ ಸೆಳೆದಿದ್ದಾರೆ. ರಾಜ್ಯ ವಿಧಾನ ಮಂಡಲದಿಂದ ಇಸ್ರಾಯಿಲ್ ದೇಶಕ್ಕೆ ಭೇಟಿ ನೀಡಿ ಅಧುನಿಕ ಕೃಷಿಯ ಬಗ್ಗೆ ಅಧ್ಯಯನ ನಡೆಸಿ ಶಾಸನ ಸಭೆಯಲ್ಲಿ ವರದಿ ಮಂಡನೆ ಮಾಡಿದ್ದಾರೆ.

    ಮಂಗಳೂರು ನಗರದ ಅಭಿವೃದ್ದಿಗಾಗಿ ಅಂತರಾಷ್ಟ್ರೀಯ ಮಟ್ಟದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದ ವಿಸ್ತರಣೆ, ಸುಸಜ್ಜಿತವಾದ ಬಸ್ಸು ನಿಲ್ದಾಣ, ಜಿಲ್ಲಾಧಿಕಾರಿ ಕಛೇರಿ, ಸ್ಮಾರ್ಟ್ ಸಿಟಿ, ರಸ್ತೆಗಳ ಅಭಿವೃದ್ದಿ, ಆಸ್ಪತ್ರೆಗಳ ಅಧುನೀಕರಣ, ಸರಕಾರಿ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಸರಕಾರವನ್ನು ಒತ್ತಾಯಿಸಿ ಭರವಸೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ರಾಜ್ಯದಲ್ಲಿಯೇ 2ನೇಯ ಸಂಜೆ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಲು ಇಲಾಖೆಯ ಒತ್ತಡ ತಂದು ಯಶಸ್ವಿಯಾಗಿರುತ್ತಾರೆ. ಜಿಲ್ಲೆಗೆ ಹೊಸ ಜಿಲ್ಲಾ ಕಾರಾಗಾರವನ್ನು ಚೇಳೂರು ಮತ್ತು ಕುರುನಾಡು ಗ್ರಾಮಗಳಲ್ಲಿ 69.8 ಏಕ್ಕೆ ಜಮೀನನ್ನು ಮಂಜೂರು ಮಾಡಿಸುವಲ್ಲಿ ಮತ್ತು ನಿರ್ಮಾಣಕ್ಕೆ ಹಣ ಒದಗಿಸುವಲ್ಲಿ ಸರಕಾರದ ಗಮನವನ್ನು ಸೆಳೆದು ಪುಮುಖ ಪಾತ್ರ ವಹಿಸಿರುತ್ತಾರೆ.

    ರಾಜ್ಯದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಸಿಕ್ಕ ಅವಧಿಯಲ್ಲಿ 20 ಜಿಲ್ಲೆಗೆ ಭೇಟಿ ಮಾಡಿ ಪಿಂಚಣಿ ಯೋಜನೆಯನ್ನು ಅರ್ಜಿ ಹಾಕದೇ ಅಧಿಕಾರಿಗಳು ತಮ್ಮ ಗ್ರಾಮದಲ್ಲಿರುವ ಮಾಹಿತಿ ಮೂಲಕ ಪಿಂಚಣಿಯನ್ನು ಫಲಾನುಭವಿಗಳಿಗೆ ಮುಟ್ಟುವಂತೆ ಆದೇಶ ಮಾಡಿಸಿ, ಯೋಜನೆಗಳನ್ನು ಜಾರಿಗೆ ತರವಂತೆ ಮಾಡಲಾಗಿದೆ. ಈ ಕಾರ್ಯಕ್ರಮವು ಉ.ಕ. ಮತ್ತು ಬಳ್ಲಾರಿಯಲ್ಲಿ ಯಶಸ್ವಿಯಾಗಿದೆ. ರಾಜ್ಯದ ಏಲ್ಲಾ ನಗರ ಪಾಲಿಕೆ ಪುರಸಭೆ ನಗರ ಸಭೆಗಳ ಸದಸ್ಯರುಗಳಿಗೆ ಗೌರವಧನವನ್ನು ಹೆಚ್ಚಿಸಬೇಕೆಂದು ಶಾಸನ ಸಭೆಯಲ್ಲಿ ಒತ್ತಾಯಿಸಿ,  ಇದನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ರಾಜ್ಯ ಸರಕಾರದ ಯೋಜನೆಗಳು ಮತ್ತು ಸರಕಾರವನ್ನು ರಾಜ್ಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. ಕೋವೀಡ್-19 ವೈರಾಣು ಹರಡಿದ್ದರಿಂದ ಲಾಕ್‍ಡೌನ್  ಸಂದರ್ಭದಲ್ಲಿ 18,000ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ, ಮಾಸ್ಕ್, ಗ್ಲೌಸ್, ವಿತರಣೆ ಮಾಡಿ ಕಷ್ಟದಲ್ಲಿರುವವರಿಗೆ ಸ್ಪಂದಿಸಿರುತ್ತಾರೆ. ರಾಜ್ಯದ ಅನೇಕ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ್ದಾರೆ.

      ಆರು ವರ್ಷಗಳ ಕಾಲ ತನ್ನ ಅಧಿಕಾರದ ಅವಧಿಯಲ್ಲಿ ಸಹಕರಿಸಿದ ಏಲ್ಲಾ ಪತ್ರಕರ್ತ ಮಿತ್ರರಿಗೂ ಮಾಧ್ಯಮ ಮಿತ್ರರಿಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ತನ್ನನ್ನು ಶಾಸನ ಸಭೆಗೆ ಬರುವಂತೆ ಅವಕಾಶ ನೀಡಿದ ಅಂದಿನ ಮುಖ್ಯಮಂತ್ರಿ ಮಾನ್ಯ ಸಿದ್ಧರಾಮಯ್ಯನವರಿಗೂ ತದನಂತರ ಸಂಸದೀಯ ಕಾರ್ಯದರ್ಶಿಯನ್ನಾಗಿ ಮಾಡಿದ ಮಾನ್ಯ ಎಚ್ .ಡಿ. ಕುಮಾರಸ್ವಾಮಿಯವರಿಗೂ ಎ.ಐ.ಸಿ.ಸಿ. ಅಧ್ಯಕ್ಷೆ ಸನ್ಮಾನ್ಯ ಸೋನಿಯಾ ಗಾಂಧಿಯವರಿಗೂ, ಮಾಜಿ ಎ.ಐ.ಸಿ.ಸಿ. ಅಧ್ಯಕ್ಷ ಮಾನ್ಯ ರಾಹುಲ್ ಗಾಂಧಿಯವರಿಗೂ ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರಿಗೂ, ಶಾಸಕರಾದ ಯು.ಟಿ. ಖಾದರ್ ರವರಿಗೂ, ಪಕ್ಷ ಏಲ್ಲಾ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸಿದರು.

       ಆರು ವರ್ಷದ ಯಶಸ್ವಿ ಹೋರಾಟಕ್ಕೆ ಸಹಕರಿಸಿದ ಏಲ್ಲರಿಗೂ ಅಭಿನಂದನೆಗಳು. ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿತ್ತೇನೆ. ಹಾಗೇಯೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತನ್ನ ಹೋರಾಟವನ್ನು ಮುಂದುವರಿಸಲಿದ್ದೇನೆ. ನನ್ನ ದೈನಂದಿನ ಕಛೇರಿಯು ವೆಲೆನ್ಸಿಯಾದ ನನ್ನ ಮನೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ಕಛೇರಿ ಬೆಳಿಗ್ಗೆ 8:00ರಿಂದ ಸಂಜೆ 5:00ರವರೆಗೆ ತೆರೆದಿರುತ್ತದೆ. ಅಲ್ಲದೇ ನನ್ನ ವಕೀಲ ವೃತ್ತಿಯನ್ನು ನಾಳೆಯಿಂದ ಪ್ರಾರಂಭವಾಗಿ ಮೆಡಿಫೇರ್ ಕಾಂಪ್ಲೆಕ್ಸ್‍ನಲ್ಲಿರುವ ನನ್ನ ಕಛೇರಿಯಲ್ಲಿ ಲಭ್ಯವಿರುತ್ತೇನೆ. ಯಾವ ಸಂದರ್ಭದಲ್ಲಿ ಜನರ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಲು ¨ಧ್ಧನಿರುತ್ತೇನೆ. ಎಂದು ಹೇಳ ಬಯಸಿದರು.