ಸರ್ವೋಚ್ಚ ನ್ಯಾಯಾಲಯದಲ್ಲಿ ಮಹಿಳಾ ನ್ಯಾಯಾಧೀಶೆಯರೆ ಇರುವ ಪೀಠವನ್ನು ಸಿಜೆಐ ಡಿ. ವೈ. ಚಂದ್ರಚೂಡ್ ರಚಿಸಿದ್ದಾರೆ. ಆ ಪೀಠದಲ್ಲಿ ನ್ಯಾಯಾಧೀಶೆಯರಾದ ಹಿಮಾ ಕೊಹ್ಲಿ ಮತ್ತು ಬೇಲಾ ಎಂ. ತ್ರಿವೇದಿ ಇದ್ದಾರೆ.

ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿನ ಇನ್ನೊಬ್ಬ ಮಹಿಳಾ ನ್ಯಾಯಾಧೀಶೆ ಬಿ. ವಿ. ನಾಗರತ್ನ. ಸರ್ವೋಚ್ಚ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶೆ ಆಗಿದ್ದವರು ಕೇರಳದ ಫಾತಿಮಾ ಬೀವಿಯವರು. ನಾನಾ ಕೋರ್ಟುಗಳ ಸೇವೆಯ ಬಳಿಕ ಫಾತಿಮಾ ಬೀವಿಯವರು 1989ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶೆ ಅದರು. ಅವರು 1997ರಲ್ಲಿ ತಮಿಳುನಾಡಿನ ರಾಜ್ಯಪಾಲರು ಸಹ ಆದರು.
ಮೊದಲ ಎಲ್ಲ ಮಹಿಳಾ ನ್ಯಾಯಾಧೀಶೆಯರ ಸರ್ವೋಚ್ಚ ನ್ಯಾಯಾಲಯದ ಪೀಠ ಆದುದು 2013ರಲ್ಲಿ. ನ್ಯಾಯಾಧೀಶೆಯರಾದ ಜ್ಞಾನ ಸುಧಾ ಮಿಶ್ರಾ, ರಂಜನಾ ಪ್ರಕಾಶ್ ದೇಸಾಯಿ ಆ ಪೀಠದಲ್ಲಿದ್ದರು. 2018ರಲ್ಲಿ ನ್ಯಾಯಾಧೀಶೆಯರಾದ ಆರ್. ಭಾನುಮತಿ, ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಮಹಿಳಾ ನ್ಯಾಯಾಧೀಶೆಯರ ಪೀಠ ರಚನೆಯಾಗಿತ್ತು.