ಮಂಗಳೂರು: ರಾಜ್ಯದಲ್ಲೇ ಮೊದಲ ಬಾರಿಗೆ ಕ್ಯಾಟ್ ವಾಕ್ ಮಾಡಿ ಕಿರೀಟ ಗೆದ್ದ ಮಂಗಳೂರಿನ ಮಹಿಳಾ ವೈದ್ಯರಿಂದ ಫ್ಯಾಷನ್ ಶೋ. ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಮಂಗಳೂರಿನ  20 ಮಹಿಳಾ ವೈದ್ಯರು  ಮಂಗಳೂರಿನ ಐಎಂಎ ಸಭಾಂಗಣದಲ್ಲಿ ಮಹಿಳಾ ವೈದ್ಯರ ಫ್ಯಾಷನ್ ಶೋ ನೆರವೇರಿಸಲಾಗಿತ್ತು. 

ಡಾಕ್ಟರ್ ರಾಂಪ್ 2023 ಯನ್ನು ಮಂಗಳೂರಿನ ಪಾಥ್ ವೆ  ಎಂಟರ್ ಪ್ರೈಸಸ್ ಹಾಗೂ ವಿಮೆನ್ ಡಾಕ್ಟರ್ ವಿಂಗ್ ಇದರ ಸಹಯೋಗದಲ್ಲಿ ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಪ್ರಾಯೋಜಕತ್ವದಲ್ಲಿ ನಡೆಸಲಾಗಿತ್ತು. ಇತೀಚೆಗೆ ನಡೆದ ಫ್ಯಾಷನ್ ಶೋ ವೊಂದರಲ್ಲಿ ಕಿರೀಟ ತನ್ನದಾಗಿಸಿಕೊಂಡ ವಿಮೆನ್ ಡಾಕ್ಟರ್ ವಿಂಗ್ ನ ಅಧ್ಯಕ್ಷೆ ಡಾ. ಜೆಸ್ಸಿ ಅವರು ಮಂಗಳೂರಿನಲ್ಲಿ ಮಹಿಳಾ ವೈದ್ಯರುಗಳಿಗೆ ಫ್ಯಾಷನ್ ಶೋ  ಆಯೋಜಿಸಲು ಉತ್ಸಾಹದಿಂದ ಮುಂದಾದರು.