ಮಂಗಳೂರು: ಜನರು ಮುಖಪರಿಚಯ ಮಾಡಿಕೊಂಡು ಜೊತೆಗೂಡಿ ಎರಡು ದಿನ ಚರ್ಚ್ ಬಳಿ ವಿವಿಧ ಆಟೋಟಗಳಲ್ಲಿ ಭಾಗವಹಿಸುವ ಕಾರ್ಯ ಶ್ಲಾಘನೀಯ ಎಂದು ಮಾಜಿ ಮೇಯರ್ ಕುಡುಪು ಮಹಾನಗರಪಾಲಿಕೆ ಸದಸ್ಯರಾದ ಭಾಸ್ಕರ ಮೋಯ್ಲಿ ನುಡಿದರು.
ಅವರು ಕೊರ್ಡೆಲ್ ಚರ್ಚ್ ಆಯೋಜಿಸಿದ ಎರಡು ದಿನಗಳ ಆಹಾರ ಮೇಳ ಹಾಗೂ ವಿವಿಧ ಅಟೋಟಗಳ ಉದ್ಘಾಟನೆ ಮಾಡಿ ಮಾತನಾಡಿದರು.
ಇನ್ನೊಬ್ಬ ಪಾಲಿಕೆ ಸದಸ್ಯರು ಕಿಶೋರ್ ಕೊಟ್ಟಾರಿ ಮಾತನಾಡಿ ಇದು ಒಳ್ಳೆಯ ಪರಂಪರೆಯ ಒಂದು ಲಕ್ಷಣ.ಸಾವಿರಾರು ಕುಟುಂಬಕ್ಕೆ ಎರಡು ದಿನಗಳು ಪರಿಚಯ ಮಾಡಲು ಮತ್ತು ಸಂಯೋಜನೆ ಮಾಡಲು ಸುಗಮ ಹಾದಿ ಎಂದರು.
ಕೊರ್ಡೆಲ್ ಚರ್ಚ್ ಮುಖ್ಯ ಧರ್ಮಗುರು ವಂ. ಫಾ. ಕ್ಲಿಫರ್ಡ್ ಫೆರ್ನಾಂಡೀಸ್ ಆಶೀರ್ವದಿಸಿದರು. ವಂ. ಫಾ. ಪಾವ್ಲ್,ಫಾ ವಿಜಯ್ ಜೊತೆಗಿದ್ದರು.
ಪಾಲನ ಮಂಡಳಿಯ ಉಪಾಧ್ಯಕ್ಷ, ಕಾರ್ಯದ, ಆಯೋಗದ ಮುಖ್ಯಸ್ಥ, ಫೈನಾನ್ಸ್ ಸಮಿತಿ ಮುಖ್ಯಸ್ಥರು ವೇದಿಕೆಯಲ್ಲಿ ಇದ್ದರು.
ರೋಯ್ ಕಾಸ್ತೆಲಿನೊ ಸಂಯೋಜನೆ ಮಾಡಿದರು.