ಮಂಗಳೂರು, ಮಾರ್ಚ್ 03:  ರಾಜ್ಯದ 50ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಗೆ ಸೇರಿದ 150 ಎಂಜಿನಿಯರಿಂಗ್ ಕಾಲೇಜುಗಳ ಬಿಇ/ಬಿಟೆಕ್ ಪ್ರವೇಶ ಪರೀಕ್ಷೆಯು ಮೇ 28ರ ಭಾನುವಾರ ಭಾರತದ 150ಕ್ಕೂ  ಹೆಚ್ಚು ನಗರಗಳ 400 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಮಂಗಳೂರಿನ ಭಾರತ್ ಮಾಲ್‌ನಲ್ಲಿರುವ ಕಾಮೆಡ್ ಕೇರ್ಸ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಯುನಿ ಗೇಜ್ ಇನೋವೇಶನ್ ಹಬ್ ತೆರೆದಿದ್ದು ಇದು ಪ್ರವೇಶಕ್ಕೆ ಮತ್ತು ಉದ್ಯೋಗಕ್ಕೆ ರಹದಾರಿ ಎಂದು ಕಾಮೆಡ್ ಕೇರ್ಸ್ (KARES) ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್ ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಎರಾ ಫೌಂಡೇಶನ್ ಸಿಇಒ ಪಿ. ಮುರಳೀಧರ್ ಮಾತನಾಡಿ ನಮ್ಮ ಯುನಿಗೇಜ್ ವಸ್ತುನಿಷ್ಠ ತೆಯ ಮಾನದಂಡಗಳ ಮೇಲೆ ಕೆಲಸ ಮಾಡುತ್ತದೆ. 40% ಅಂಕ ಪಡೆದು ಪ್ರವೇಶ ಪಡೆಯುವವರನ್ನು ಡಿಸ್ಟಿಂಕ್ಷನ್‌ಗೆ ಒಯ್ಯುವುದು ನಮ್ಮ ಜವಾಬ್ದಾರಿ ಎಂದರು.

ಕರಾವಳಿಯು ಕಲಿಕಾ ವಲಯವಾಗಿದೆ,  ದಕ್ಷಿಣ ಕನ್ನಡದಿಂದ ನಮಗೆ 9,000 ಅರ್ಜಿಗಳು ಬಂದಿವೆ. ನಮ್ಮ ಕಾಮೆಡ್ ಕೇರ್ಸ್ ಮಂಗಳೂರಿನಲ್ಲಿ ಐದು, ಉಡುಪಿಯಲ್ಲಿ ಎರಡು, ಪುತ್ತೂರಿನಲ್ಲಿ ಒಂದು ಎಂದು ಎಂಟು ಇನೋವೇಶನ್ ಹಬ್‌ಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ 40, ಮೈಸೂರು, ಕಲಬುರಗಿ, ಬೆಳಗಾವಿಗಳಲ್ಲಿ ಇಂತಾ ಇನೋವೇಶನ್ ಕೇಂದ್ರಗಳು ಇವೆ. ಇಲ್ಲಿನ ವಿದ್ಯಾರ್ಥಿಗಳ ಬೇಡಿಕೆಗೆ ಕಾಮೆಡ್ ಕೇರ್ಸ್ ಇನೋವೇಶನ್ ಕೇಂದ್ರವು ಸ್ಪಂದಿಸುತ್ತದೆ ಎಂದು ಕುಮಾರ್ ತಿಳಿಸಿದರು.

ಕಳೆದ 50 ವರುಷಗಳಿಂದ ಕರ್ನಾಟಕವು ಉನ್ನತ ಶಿಕ್ಷಣದಲ್ಲಿ ಮೊದಲ ಸ್ಥಾನದಲ್ಲಿದೆ. ಡಾಕ್ಟರ್ ಕುಮಾರ್ ಅವರು ಕಾಮೆಡ್ ಕೇರ್ಸ್ ಸ್ಥಾಪಕರಾಗಿದ್ದು 45 ವರುಷಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೊಫೆಸರ್, ನಿರ್ವಾಹಕರಾಗಿ ಅನುಭವ ಪಡೆದವರು ಎಂದು ಕುಮಾರ್ ಬಗೆಗೆ ಮುರಳೀಧರ್ ತಿಳಿಸಿದರು.

ಕಾಮೆಡ್ ಕೆ ಪರೀಕ್ಷೆಯಲ್ಲಿ ಕಳೆದ ಬಾರಿ 40% ಪ್ರಶ್ನೆಗಳು ಗಣಿತದ ಬಗೆಗೆ ಇದ್ದವು. ಎಂಜಿನಿಯರಿಂಗ್ ವಿಜ್ಞಾನಕ್ಕೆ ಗಣಿತವೇ ಬುಡಕಟ್ಟು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.