ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್‌ ಲೀಟರಿಗೆ 35 ಪೈಸೆ ಏರಿಸಿದವು. ಸೆಪ್ಟೆಂಬರ್ ಕೊನೆಯ ವಾರದ ಬಳಿಕ ಇದು ಪೆಟ್ರೋಲಿಗೆ 14ನೇ ಹಾಗೂ ಡೀಸೆಲ್‌‌ಗೆ 17ನೇ ಬಾರಿ ಬೆಲೆ ಏರಿಕೆ ಆಗುವುದಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಒಂದು ಲೀಟರಿಗೆ ಕ್ರಮವಾಗಿ ಮುಂಬಯಿಯಲ್ಲಿ ರೂ. 111.09 ಹಾಗೂ 101.78, ಬೆಂಗಳೂರಿನಲ್ಲಿ ರೂ. 108.80 ಹಾಗೂ 99.63 ದರದಲ್ಲಿ ಮಾರಾಟ ಆಗುತ್ತಿವೆ.