ಬೆಂಗಳೂರು ಹೊರ ವಲಯದ ತಮಿಳುನಾಡು ಗಡಿಯ ಅತ್ತಿಬೆಲೆಯ ವಾರ್ಷಿಕ ಪಟಾಕಿ ಸಗಟು ಮಳಿಗೆ ಬೆಂಕಿ ದುರಂತದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. 2 ಶವಗಳು ಅನಂತರ ಸಿಕ್ಕಿವೆ.

ಸತ್ತವರೆಲ್ಲ ತಮಿಳುನಾಡಿನವರು,  ಬಾಲ ಕಾರ್ಮಿಕರು ಇರುವುದು ಶವಗಳಿಂದ ಸ್ಪಷ್ಟಗೊಂಡಿದೆ. ಶವಾಗಾರದೆದುರು ಸಂಬಂಧಿಕರ ಗೋಳು ಮುಗಿಲು ಮುಟ್ಟಿತ್ತು. ಸತ್ತ ಶವಗಳು ಸುಟ್ಟಿರುವುದರಿಂದ ಗುರುತು ಹಚ್ಚಲು ಕಷ್ಟವಾಗಿದೆ. ಇತರ ಕೆಲಸಗಾರರು ಆಸ್ಪತ್ರೆ ಬಳಿ ಸೇರಿದ್ದರು ಮತ್ತು ಇತರ ಪಟಾಕಿ ಮಳಿಗೆಗಳು ಸದ್ಯ ಬಾಗಿಲು ತೆರೆದಿಲ್ಲ. ಬಾಲಾಜಿ ಟ್ರೇಡರ್ಸ್ ಸಂಪೂರ್ಣ ಬೂದಿಯಾಗಿದೆ.