ಮಂಗಳೂರು: 2025 ನೇ ಸಾಲಿನ ಬಿ.ಇಡಿ. ದಾಖಲಾತಿಯ ಸಂಬಂಧ 2 ನೇ ಪಟ್ಟಿಯ ಹಂಚಿಕೆಯ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್  ಮ್ಯಾಟ್ರಿಕ್ಸ್‍ಅನ್ನು  ಡಿ.23 ರಂದು 23 www.schooleducation Karnataka.gov.in  ರ CACELL ವೆಬ್‍ಸೈಟಿನ ವಿಭಾಗದಲ್ಲಿ ಪ್ರಕಟಿಸಲಾಗಿದೆ. ಸೀಟು ಹಂಚಿಕೆಯಾಗದೇ ಇರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆಗಾಗಿ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಕಾಲೇಜುಗಳ ಆಯ್ಕೆಯ Option entry ಮಾಡಿಕೊಳ್ಳಲು ಡಿ.29 ರ ವರೆಗೆ ಅವಕಾಶ ಕಲ್ಪಿಸಿದೆ. ಕಾಲೇಜುಗಳ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಸೀಟು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. 

ನ. 12 ರಂದು ಪ್ರಕಟಿಸಿರುವ ಆಕ್ಷೇಪಿತ/ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದಿದ್ದಲ್ಲಿ ಹಾಗೂ ಆಕ್ಷೇಪಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹ ಅಭ್ಯರ್ಥಿಗಳು ತಮ್ಮ ನೋಡಲ್‍ ಕೇಂದ್ರಗಳಿಗೆ ತೆರಳಿಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಲು ಡಿ. 29ರ ವರೆಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.