ಸತತ ಏಳನೆಯ ಬಾರಿ ಗೆದ್ದು ಬಿಜೆಪಿ ಪಕ್ಷವು ಗುಜರಾತಿನಲ್ಲಿ ಅಧಿಕಾರದ ಗದ್ದುಗೆ ಉಳಿಸಿಕೊಂಡಿತು. ಬಿಜೆಪಿಯು ಕಳೆದ ಬಾರಿ 99 ಕ್ಷೇತ್ರಗಳಲ್ಲಿ ಗೆದ್ದಿದ್ದುದು ಈ ಬಾರಿ 156 ಕ್ಷೇತ್ರಗಳಲ್ಲಿ ಗೆದ್ದು ಭಾರೀ ಬಹುಮತ ಪಡೆಯಿತು. ಈ ಪರಿಯ ಗೆಲುವಿಗೆ ಎಎಪಿ, ಎಐಎಂಐಎಂ ಸ್ಪರ್ಧೆ ನೆರವು ದೊರೆತಿರುವುದು ಸ್ಪಷ್ಟ. 

ಕಳೆದ ಬಾರಿ 77 ಕಡೆ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 17 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಇದರರ್ಥ ವಿಧಾನ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇರುವುದಿಲ್ಲ. ಕಾಂಗ್ರೆಸ್ಸಿನ ಬುಡ ಕತ್ತರಿಸಿದ ಎಎಪಿ ನಿರಾಶಾದಾಯಕವಾಗಿ 5  ಕಡೆ ಮಾತ್ರ ಗೆದ್ದಿದೆ. ಆ ಮೂಲಕ ಗುಜರಾತಿನಲ್ಲಿ ಖಾತೆ ತೆರೆದಂತಾಗಿದೆ. 

ಕಳೆದ ಬಾರಿ 6 ಕ್ಷೇತ್ರಗಳು ಇತರರ ಪಾಲಾಗಿದ್ದರೆ ಈ ಬಾರಿ ಅವರ ಪಾಲು 4.  ಮೊರ್ಬಿ, ಬಿಲ್ಕಿಸ್, ಬುಡಕಟ್ಟು ವಲಯ, ಮುಸ್ಲಿಂ ಸಮುದಾಯದ ಪ್ರದೇಶ ಎಲ್ಲ ಕಡೆ ಈ ಬಾರಿ ಬಿಜೆಪಿ ಜಯ ಕಂಡಿದೆ.