ಬಂಟ್ವಾಳ: ಸಿದ್ದಕಟ್ಟೆಯ ಗುಣಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ತರಗತಿಯ ಮಕ್ಕಳು ತಯಾರಿಸಿದ ಗೂಡು ದೀಪದಿಂದ ಸಭಾಂಗಣ ಕಂಗೊಳಿಸುತಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಾನ್ವಿ ಮತ್ತು ವರ್ಷ ನಿರೂಪಣೆ ಮಾಡಿದರು.









ಮೊದಲಿಗೆ ಪ್ರಾರ್ಥನೆ ಮೂಲಕ ಪ್ರಾರಂಭಿಸಿದರು. ತದನಂತರ ಎಲ್ಲಾ ತರಗತಿಯ ಮಕ್ಕಳು ಹಣತೆ ಬೆಳಗಿಸಿದರು. ಹಾಗೇನೇ ದೀಪಾವಳಿಯ ವಿಶೇಷತೆಯ ಬಗ್ಗೆ ಕಿರು ರೂಪಕದ ಮೂಲಕ ತಿಳಿಸಿಕೊಟ್ಟರು. ಮಕ್ಕಳು ನೃತ್ಯ ಮಾಡಿ ಎಲ್ಲರನ್ನು ಮನರಂಜಿಸಿದರು. ಹಾಗೇನೇ ಗೂಡುದೀಪ ತಯಾರಿಸಿದ ಎಲ್ಲಾ ತರಗತಿಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಮುಖ್ಯಪಾಧ್ಯಾಯಿನಿ ಜಯಶ್ರೀ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಎಲ್ಲಾ ಮಕ್ಕಳಿಗೂ ಶಿಕ್ಷಕರಿಗೂ ದೀಪಾವಳಿಯ ಶುಭಾಶಯ ಕೋರಿದರು. ತದನಂತರ ಎಲ್ಲರಿಗೂ ಸಿಹಿ ಊಟ ನೀಡಲಾಯಿತು. ಕೊನೆಯದಾಗಿ ಪಟಾಕಿ ಹಚ್ಚುದರ ಮುಖಾಂತರ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.