ಮೂಡಬಿದಿರೆ: ನೀರುಡೆ ಮೂಲದ ಮುಂಬಯಿ ಡಿಆರ್‌ಐ ಪ್ರಾಂತೀಯ ಘಟಕದ ಉಪ ನಿರ್ದೇಶಕಿ ಮಿಶೆಲ್ ಕ್ವೀನೀ ಡಿಕೋಸ್ಟಾರಿಗೆ ಕೇಂದ್ರ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು 2022ನೇ ಸಾಲಿನ ಡಿಆರ್‌ಐ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಕಳೆದ ವರುಷ 1.9 ಕಿಲೋ ಮಾದಕ ದ್ರವ್ಯದೊಡನೆ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಓಡಿದ ಇಬ್ಬರನ್ನು ಒಬ್ಬರೇ ತಡೆದು ನಿಲ್ಲಿಸಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ಬಂದಿದೆ.
ಕೃಷಿಕ ಲಾಜರಸ್ ಡಿಕೋಸ್ಟಾರ ಮಗಳಾದ ಕ್ವೀನೀ 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರಿಯಾಂಕ್ ಪಡೆದು ಅದೇ ವರುಷ ಜಿಎಸ್‌ಟಿ ಅಸಿಸ್ಟೆಂಟ್ ಕಮಿಶನರ್ ಆಗಿ ನೇಮಕ ಗೊಂಡಿದ್ದರು. ಡಿಆರ್‌ಐ ದಾಳಿ ದಳದವರು ಬರುವವರೆಗೆ ಮಾದಕ ದ್ರವ್ಯ ಸಾಗಾಟಗಾರರನ್ನು ಹಿಡಿದಿಟ್ಟು ಸಾಹಸ ಮೆರೆದಿದ್ದರು.