ಮಹಾನಗರ : ನಗರದ ಚಿಲಿಂಬಿಯ ಶ್ರೀ ಶಾರದಾ ವಿದ್ಯಾನಿಕೇತನ ನರ್ಸರಿ ಶಾಲೆಯಲ್ಲಿ ಮಕ್ಕಳನ್ನು ಸ್ವಾಗತಿಸುವ ಕಾರ್ಯಕ್ರಮವು ಇಂದು ವಿಶಿಷ್ಟ ರೀತಿಯಲ್ಲಿ ಜರಗಿತು. ಶಾಲಾ ಮಕ್ಕಳಿಗೆ ಶ್ರೀ ಶಾರದಾ ಮಾತೆಯ ತಿಲಕವಿಟ್ಟು, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ಶ್ರೀಪಾದರ ಅನುಗ್ರಹ ಅಕ್ಷತೆ ನೀಡಿ, ಎಲ್ಲಾ ಮಕ್ಕಳಿಗೆ ಸಸ್ಯಗಳನ್ನು ನೀಡಿ, ಅದರ ಲಾಲನೆ ಪಾಲನೆ ಬಗ್ಗೆ ಮಾಹಿತಿಯಿತ್ತು ಶಾಲೆಯ ರಜತ ಮಹೋತ್ಸವಾಚರಣೆ ಸಂಧರ್ಭದಲ್ಲಿ ಉತ್ತಮ ಗಿಡ ಪೋಷಿಸಿದವರಿಗೆ ಬಹುಮಾನ ನೀಡಿ ಪುರಸ್ಕರಿಸುವುದಾಗಿ ಘೋಷಿಸಿ ಪ್ರಕೃತಿ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಲಾಯಿತು.
ಸಸ್ಯಗಳನ್ನು ನೆಟ್ಟು ಬೆಳೆಸುವ ಪರಿಯನ್ನು ವಿವರವಾಗಿ ತಿಳಿಸಿ ತಿಮರೆಯಿಂದ ಮಕ್ಕಳ ಜ್ಞಾನಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿ ಇತರ ಆಯುರ್ವೇದಿಕ್ ಔಷಧಿಗಳ ಗಿಡಗಳಿಂದ ಮಕ್ಕಳ ಬೆಳವಣಿಗೆಯ ಉಪಯುಕ್ತತೆ ಬಗ್ಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಸ್ಯ ಶ್ಯಾಮಲ ಖ್ಯಾತಿಯ ಎಂ ದಿನೇಶ್ ನಾಯಕ್ ವಿಟ್ಲ ಇವರು ತಿಳಿಸಿದರು. ಪ್ರಕೃತಿ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮಕ್ಕಳ ಪೋಷಕರಿಗೆ ಕರೆ ನೀಡಿದರು. ನಾಯಕ್ ಇವರು ಸುಮಾರು 2 ಲಕ್ಷಕ್ಕೂ ಮಿಕ್ಕಿ ಸಸಿಗಳನ್ನು ಉಚಿತವಾಗಿ ಈ ವರೆಗೆ ನೀಡಿ ಸಸ್ಯ ಪ್ರೇಮ ಮೆರೆದರು. 1800 ಕ್ಕೂ ಹೆಚ್ಚು ಪರಿಸರ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿ ಪರಿಸರವನ್ನು ಸಂರಕ್ಷಿಸುವವಂತೆ ಮನವಿ ಮಾಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ 2021ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್ ಚಿಲಿಂಬಿ ಇದರ ಅಧ್ಯಕ್ಷ ಸಾಲಿಗ್ರಾಮ ಸುಬ್ರಾಯ ನಾಯಕ್ ಮಕ್ಕಳನ್ನು ಪ್ರೀತಿಪೂರ್ವಕ ಸ್ವಾಗತಿಸಿ ಮಕ್ಕಳ ಜ್ಞಾನದಾಹ ನೀಗಿಸಲು ಮತ್ತು ಸರ್ವೋತೋಮುಖ ಅಭಿವೃದ್ಧಿಗೆ ಟ್ರಸ್ಟ್ ಮತ್ತು ಅಧ್ಯಾಪಕ ವೃಂದ ಸದಾ ಕಾಳಜಿ ವಹಿಸುತ್ತದೆ ಎಂದು ನುಡಿದರು.
ಮುಖ್ಯ ಶಿಕ್ಷಕಿ ವೀಣಾ ಕಿರಣ್ ಸ್ವಾಗತಿಸಿ ನಿರೂಪಿಸಿದರು. ಚೇತನಾ ಚಿಪ್ಲೂಂಕರ್ ವಂದಿಸಿದರು. ಟ್ರಸ್ಟ್ ನ ಉಪಾಧ್ಯಕ್ಷರಾದ ದುರ್ಗೆಶ್ ಚೆಟ್ಟಿಯಾರ್, ಶಾರದಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಅಜಯ್ ಶೇಟ್, ಶಾರದಾ ಮಹಿಳಾ ಮಂಡಳಿಯ ಅಧ್ಯಕ್ಷೆ ಶರ್ಮಿಳಾ ರಘುರಾಮ್ ಮತ್ತು ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.