ಸೂರತ್ಕಲ್: ಮತದಾನದ ನಂತರ ಇವಿಎಂ ಮತಯಂತ್ರಗಳನ್ನು ಭದ್ರವಾಗಿರುವ ಸೂರತ್ಕಲ್ ನ  ಎನ್‌ಐಟಿಕೆ ಸ್ಟ್ರಾಂಗ್ ರೂಮ್ ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್  ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಹಾಗೂ ಚುನಾವಣೆಯ ಪೊಲೀಸ್ ವೀಕ್ಷಕರಾದ ಬಿನಿತಾ ಠಾಕೂರ್ ಅವರು ಏ. 25ರ ಗುರುವಾರ ಭೇಟಿ ನೀಡಿ, ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು.