ರಶಿಯಾದಲ್ಲಿ ಮತ್ತೆ ಕೋವಿಡ್‌ ಸೋಂಕು ಹೆಚ್ಚಾಗಿದ್ದು, ಶನಿವಾರದ 1,075 ಸಾವಿನೊಂದಿಗೆ ಸತತ ಅಯ್ದನೆಯ ದಿನ ಆ ದೇಶವು ಸಾವಿರ ಪ್ಲಸ್ ಸಾವುಗಳನ್ನು ಕಂಡಿತು.

ಶನಿವಾರ 37,678 ಹೊಸ ಸೋಂಕಿತರು ಪತ್ತೆಯಾಗಿದ್ದು, ಸಾಂಕ್ರಾಮಿಕ ಮತ್ತೆ ಸುತ್ತುವರಿದಿದೆ.

ಜೀವನಾವಶ್ಯಕ ವಸ್ತುಗಳ ಹೊರತಾಗಿ ಬೇರೆಲ್ಲವನ್ನೂ ಮುಚ್ಚುವಂತೆ ಅಧ್ಯಕ್ಷ ವ್ಲದಿಮಿರ್ ಪುತಿನ್ ಕರೆ ನೀಡಿದರು. ನವೆಂಬರ್ 1ರಿಂದ ದೇಶವ್ಯಾಪಿ ಲಾಕ್‌ಡೌನ್ ಜಾರಿಯಾಗುವಂತೆ ಅವರು ಆಡಳಿತಾಂಗಕ್ಕೆ ಸೂಚಿಸಿದರು.