ಕೋಳಿಕ್ಕೋಡು ಸುತ್ತ ಕಳೆದ ಆರೇಳು ವರುಷಗಳಿಂದ ಜಸ್ನಾ ಸಲೀಂ ಬರೆಯುವ ಚಿತ್ರಗಳಿಗೆ ಭಾರೀ ಬೇಡಿಕೆ. ತರಬೇತಿ ಪಡೆಯದೆ ತಾನೇ ವರ್ಣಚಿತ್ರ ಕಲೆ ರೂಢಿಸಿಕೊಂಡವರು ಜಸ್ನಾ.
ಈ ಮುಸ್ಲಿಂ ಯುವತಿ ಬರೆದ ವರ್ಣ ಚಿತ್ರಗಳಲ್ಲಿ ಹಿಂದೂ ದೇವರುಗಳ ಚಿತ್ರಗಳ ಸಂಖ್ಯೆಯೇ ಹೆಚ್ಚು. 500ಕ್ಕೂ ಹೆಚ್ಚು ಹಿಂದೂ ದೇವರುಗಳನ್ನು ಈಕೆ ಬಣ್ಣದಲ್ಲಿ ಬರೆದಿದ್ದಾರೆ.
ಅವರು ಆಸೆಪಟ್ಟು ಇತ್ತೀಚೆಗೆ ಉಲನಾಡು ಕೃಷ್ಣ ದೇವಾಲಯಕ್ಕೆ ತಾನು ಕೈಯಾರೆ ಬರೆದ ಕೃಷ್ಣನ ಚಿತ್ರಪಟವನ್ನು ಕೊಡುಗೆಯಾಗಿ ನೀಡಿದ್ದಾರೆ.