ವರದಿ / ರಾಯಿ ರಾಜಕುಮಾರ ಮೂಡುಬಿದಿರೆ
ಬಂಟ್ವಾಳ, ನ. 26: ದ.ಕ. ಜಿಲ್ಲಾ ಕೊಯಿಲ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರದ ರಕ್ಷಣೆಯನ್ನು ನಾವು ಹೇಗೆ ಮಾಡಬಹುದು ಎಂದು ತಿಳಿಸಿ ಹೇಳಲಾಯಿತು.

ಬೆಂಗಳೂರು ಸೂರ್ಯ ಫೌಂಡೇಶನ್ ನ ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ ಮೂಡುಬಿದಿರೆಯವರು ಆಗಮಿಸಿ ಗ್ರಾಮೀಣ ಕೃಪಾಂಕ, ಗ್ರಾಮೀಣ ಶಿಕ್ಷಣದ ಲಾಭಗಳನ್ನು ತಿಳಿಸಿದರು. ಅಲ್ಲದೆ ಗ್ರಾಮೀಣ ಪರಿಸರದ ರಕ್ಷಣೆಯನ್ನು ಮಾಡುವ, ತೆಳು ಪ್ಲಾಸ್ಟಿಕ್ ನನ್ನು ಉಪಯೋಗಿಸದೇ ಬದುಕಿನಲ್ಲಿ ಸಾರ್ಥಕತೆ ಪಡೆಯುವುದು ಮುಖ್ಯ ಎಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮಿ ವಂದಿಸಿದರು.