ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಕುಳದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ವತಿಯಿಂದ ಸಾರ್ವಜನಿಕರಿಗೆ ಸರಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಮಾಹಿತಿ ಕೇಂದ್ರ ಆರಂಭಗೊAಡಿದೆ.
ಇದರ ಉದ್ಘಾಟನೆಯನ್ನು ಅಬ್ದುಲ್ ಮಜೀದ್ ಬಾವ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಗ್ರಾಮ ಸಮಿತಿ ಅಧ್ಯಕ್ಷ ಯಾಸೀನ್ ಅರ್ಕುಳ, ಜಿಲ್ಲಾ ಸಮಿತಿ ಸದಸ್ಯರಾದ ಖಾದರ್ ಫರಂಗಿಪೇಟೆ, ಲ್ಯಾನ್ಸಿ ಥೋರಸ್, ರಶೀದ್ ಅರ್ಕುಳ ಹಾಗಳಿನ್ನಿತರರು ಉಪಸ್ಥಿತರಿದ್ದರು.