ಕಾರ್ಕಳ: ಕ್ರಿಯೇಟಿವ್ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ಜನವರಿ ತಿಂಗಳಿನಲ್ಲಿ ನ್ಯಾಷನಲ್ ಎಜೆನ್ಸಿ ನಡೆಸಿದ ಜಂಟಿ ಪ್ರವೇಶ ಪರೀಕ್ಷೆ-ಮುಖ್ಯ (ಜೆಇಇ-ಮೈನ್) 2ಎ (ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
DEEKSHA PANDU
VARUN G. NAYAK
SWASTHIK KRIHNA MURTHY BHAT
ವಿದ್ಯಾರ್ಥಿಗಳಾದ ದೀಕ್ಷಾ ಪಾಂಡು 95.8311 ಪರ್ಸಂಟೈಲ್, ಸಾತ್ವಿಕ್ ಕೆ ಭಟ್ 91.4659 ಪರ್ಸಂಟೈಲ್, ವರುಣ್ ಜಿ ನಾಯಕ್ 86.1552 ಪರ್ಸಂಟೈಲ್ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕ್ರಿಯೇಟಿವ್ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕ ಸುಮಂತ ದಾಮ್ಲೆ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ. ಕ್ರಿಯೇಟಿವ್ ಕಾಲೇಜಿನ ಪ್ರಥಮ ವರ್ಷದಲ್ಲಿಯೇ ಅತ್ಯುತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.