ಮಂಗಳವಾರದ ಕೊರೋನಾ ಸೋಂಕು ಸೇರಿ ಬುಧವಾರ ಲೋಕದಲ್ಲಿ ಕೊರೋನಾ ಬಾಧಿತರ ಸಂಖ್ಯೆಯು 15 ಕೋಟಿ ‌ಆಯಿತು. ಭಾರತದಲ್ಲಿ ಕಳೆದ ಒಂದೇ ದಿನ ಆದ ಕೊರೋನಾ ಸಾವು 3,285.

ಕಳೆದ 24 ಗಂಟೆಗಳದೂ ಸೇರಿ ನಿನ್ನೆ ರಾತ್ರಿಗೆ ಕೊರೋನಾ ಬಾಧಿತರ ‌ಸಂಖ್ಯೆ 14,93,28,858. ಬುಧವಾರ ಈ  ಸಂಖ್ಯೆಯು 15 ಕೋಟಿ ‌ದಾಟುವ ಆತಂಕ ಸತ್ಯದತ್ತ ಸಾಗಿದೆ. ಒಟ್ಟು ಜಗತ್ತಿನಲ್ಲಿ ಕೋವಿಡ್ ‌ಸೋಂಕಿಗೆ ಬಲಿಯಾದವರ ಸಂಖ್ಯೆ 31,48,781.

ಎರಡು ಲಕ್ಷ ದಾಟಿದ ‌ಭಾರತದ ಕೊರೋನಾ ಬಲಿ
ಭಾರತವು ಸತತ ಐದನೆಯ ದಿನವೂ ಸಹ ಕೋವಿಡ್ ಸೋಂಕು ಮತ್ತು ಚಿಕಿತ್ಸೆ ಅವ್ಯವಸ್ಥೆ ಬಗೆಯಲ್ಲಿ ಜಾಗತಿಕ ಸುದ್ದಿ ಮಾಡಿತು. ಭಾರತದಲ್ಲಿ ಮಂಗಳವಾರ ರಾತ್ರಿಯವರೆಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ‌2,01,165. ಭಾರತದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ ಈಗ 1,79,88,637. ಎರಡು ಕೋಟಿಗೆ ಸಮೀಪಿಸಿದೆ.