1. ಅತ್ಯಗತ್ಯವಾದ ಆಹಾರ ಧಾನ್ಯ, ಹಣ್ಣು, ತರಕಾರಿ, ಹಾಲು, ಮೀನು ಮಾಂಸ ಬೆಳಿಗ್ಗೆ 6ರಿಂದ 10ರವರೆಗೆ‌ ಲಭ್ಯ

2. ವಾಯುಯಾನ, ರೈಲು ಸೇವೆ ಇದ್ದು, ಟಿಕೆಟ್ ಹೊಂದಿದವರು ಟ್ಯಾಕ್ಸಿ, ರಿಕ್ಷಾಗಳಲ್ಲಿ ನಿಲ್ದಾಣಗಳಿಗೆ ಹೋಗಬಹುದು.

3. ಆನ್‌ಲೈನ್ ತರಗತಿ ಹಾಗೂ ಸೀಮಿತ ಪರೀಕ್ಷೆ ನಡೆಸಬಹುದು.

4. ರೆಸ್ಟೋರೆಂಟ್, ಹೋಟೆಲ್, ಮದ್ಯ ಮಳಿಗೆಗಳಲ್ಲಿ ಪಾರ್ಸೆಲ್‌ ಮಾತ್ರ ನೀಡಬಹುದು.

5. ಸರಕಾರಿ ಕಚೇರಿಗಳಲ್ಲಿ 50% ಸಿಬ್ಬಂದಿ ಹಾಜರಿರಬಹುದು.

5. ಆಸ್ಪತ್ರೆ, ಚಿಕಿತ್ಸಾಲಯ, ಪ್ರಯೋಗಾಲಯ, ನೆತ್ತರು ಬ್ಯಾಂಕು, ಮೆಡಿಕಲ್ ಸೆಂಟರ್ ತೆರೆದಿರುತ್ತದೆ.

6. ಬೇಸಾಯ ಹಾಗೂ ಸಂಬಂಧಿಸಿದ ಕೆಲಸ ಮತ್ತು ‌ವ್ಯಾಪಾರ, ಮನರೇಗಾ ಚಟುವಟಿಕೆಗಳಿಗೆ ತಡೆ ಇಲ್ಲ.

7. ಸರಕು ಸಾಗಣೆಗೆ ತಡೆಯಿಲ್ಲ. 24 ಗಂಟೆಯೂ ಹೋಂ ಡೆಲಿವರಿ ಇರುತ್ತದೆ.

8. ಬ್ಯಾಂಕು, ವಿಮೆ, ಎಟಿಎಂ ತೆರೆದಿರುತ್ತವೆ.

9. ಗಾರ್ಮೆಂಟ್ಸ್ ಹೊರತಾದ ಎಲ್ಲ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ.

10. ಕಾಯಿಲೆಯವರು ಮತ್ತವರ ಮನೆಯವರಿಗೆ ಸಂಚರಿಸಲು ಅವಕಾಶ.

11. ಎಲ್ಲ ಕಟ್ಟುಗೆ ಕೆಲಸಗಳು, ದುರಸ್ತಿ ಕೆಲಸಗಳು ಮುಂದುವರಿಯುತ್ತವೆ.


ಅವಕಾಶವಿಲ್ಲ


1. ಸಾರ್ವಜನಿಕ, ಖಾಸಗಿ ಇನ್ನಿತರ ರಸ್ತೆ ಪ್ರಯಾಣ ವಾಹನಗಳು ಇರುವುದಿಲ್ಲ.

2. ತುರ್ತು ಹಾಗೂ ಅನುಮತಿ ಪಡೆದವುಗಳ ಹೊರತು ಟ್ಯಾಕ್ಸಿ, ಕ್ಯಾಬ್, ಆಟೋ ಸೇವೆ ‌ನಿಷೇಧ.

3. ಬೆಂಗಳೂರಿನಲ್ಲಿ ಮೆಟ್ರೋ ರೈಲು, ಬಿಎಂಟಿಸಿ, ಕೆಎಸ್ಆರ್‌ಟಿಸಿ ‌ಸೇವೆ ರದ್ದು.

4. ಶಾಲೆ, ಕಾಲೇಜು, ಕೋಚಿಂಗ್ ಕ್ಲಾಸ್ ಬಂದ್.

5. ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೊಳ, ಕ್ಲಬ್, ರಂಗಮಂದಿರ, ಸಭಾಂಗಣ ತೆರೆಯುವಂತಿಲ್ಲ.

6. ಅಂತರರಾಜ್ಯ, ಅಂತರಜಿಲ್ಲಾ ಪ್ರಯಾಣಿಕರ ‌ವಾಹನ ಓಡಾಡುವಂತಿಲ್ಲ.

7. ಸಾಮಾಜಿಕ, ರಾಜಕೀಯ, ಮನೋರಂಜನಾ, ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳು ರದ್ದು.

8. ಧಾರ್ಮಿಕ ನೆಲೆಗಳಲ್ಲಿ ನಿತ್ಯ ‌ಪೂಜೆಯ ಹೊರತು ಭಕ್ತಾದಿಗಳು ಬರುವಂತಿಲ್ಲ.

9. ಆಭರಣಗಳು, ಬಟ್ಟೆ ಅಂಗಡಿ, ವಿದ್ಯುತ್ ವಸ್ತು, ಮನೆ ಬಳಕೆ ವಸ್ತುಗಳ ಅಂಗಡಿ ‌ಬಾಗಿಲು ಹಾಕಿರಬೇಕು.

10. ಮದುವೆಯಲ್ಲಿ 50 ಜನ, ಅಂತ್ಯಕ್ರಿಯೆಯಲ್ಲಿ 5 ಜನ ಮಾತ್ರ ಭಾಗವಹಿಸಬಹುದು.

11. ಮಾನ್ಯತೆ ಪಡೆದ ಗುರುತಿನ ಚೀಟಿಯ ಹೊರತು ಓಡಾಟ ನಿಷಿದ್ಧ.

12. ಐಟಿ ಸಿಬ್ಬಂದಿಯು ತುರ್ತು ಅಲ್ಲದ ಕೆಲಸಕ್ಕೆ ಕಚೇರಿಗೆ ಹೋಗುವಂತಿಲ್ಲ.