ಮಂಗಳೂರು:- ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣ, ರಸ್ತೆ ಅಗಲೀಕರಣ ಮತ್ತು ಕಾಮಾಗಾರಿ ನಿರ್ಮಾಣಗೊಳ್ಳುವ ಸಂದರ್ಭದಲ್ಲಿ ರಿಕ್ಷಾ, ಕಾರು ಮತ್ತು ಟೆಂಪೋ ಚಾಲಕರಿಗೆ ಸೂಕ್ತ ಬದಲಿ ವ್ಯವಸ್ಥೆ ಮಾಡದೇ ತೊಂದರೆ ನೀಡುತ್ತಿರುವುದನ್ನು ಕೂಡಲೇ ಜಿಲ್ಲಾಧಿಕಾರಿ ಗಮನಿಸಿ, ಅಸಂಘಟಿತ ಕಾರ್ಮಿಕ ವರ್ಗಕ್ಕೆ , ದುಡಿಯುವ ಅವಕಾಶದಿಂದ ವಂಚಿತರಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ  ಐವನ್ ಡಿ ಸೋಜರವರು ಒತ್ತಾಯಿಸಿದರು.

ಮಂಗಳೂರು ನಗರದ ವ್ಯಾಪ್ತಿಯಲ್ಲಿ ಒಳಪಟ್ಟ ಕಾವೂರು, ಕಂಕನಾಡಿ, ಕದ್ರಿ, ಯೆಯ್ಯಾಡಿ, ವೆಲೆನ್ಸಿಯಾ ಮತ್ತು ಜಪ್ಪು ಮುಂತಾದ ಕಡೆಗಳಲ್ಲಿ ಚಾಲಕರಿಗೆ ನೀಡುವ ತೊಂದರೆ ಬಗ್ಗೆ ಸಭೆ ನಡೆಸಿದ ಇವರು ಮನವಿ ಸ್ವೀಕರಿಸಿದರೂ, ಸೂಕ್ತ ಸ್ಪಂದನೆ ನೀಡದೇ ಇದ್ದಲ್ಲಿ,  ನಗರಪಾಲಿಕೆ ಮತ್ತು ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು  ಐವನ್ ಡಿ ಸೋಜರವರು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.