ಕಾರ್ಕಳ: ಸೈಂಟ್ ಲೋರೆನ್ಸ್ ಹೈಸ್ಕೂಲ್,ಅತ್ತೂರು,ಕಾರ್ಕಳ,ಇಲ್ಲಿನ 1979-80 ರ ಬ್ಯಾಚಿನ ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್,.ಜೆ.ಸಿ.ಐ.,ಕಾರ್ಕಳ,ಕಿಲ್ಲಬೆಟ್ಟು ದಿ| ಸುರೇಶ್ ಹೆಗ್ಡೆ ಅಭಿಮಾನಿ ಬಳಗ,ಅತ್ತೂರು,ಜನನಿ ಮಿತ್ರ ಮಂಡಳಿ,ವಾಂಟ್ರಾಯ್ ಪದವು ಕಾರ್ಕಳ,ಯುವಕ ಮಂಡಲ,ಅತ್ತೂರು,ಬೀಡಿ ಕಾರ್ಮಿಕರ ಆಸ್ಪತ್ರೆ,ಕಾರ್ಕಳ ಮತ್ತು ಉಡುಪಿ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ,ಕಾರ್ಕಳ,ಆರೋಗ್ಯ ಆಯೋಗ ಮತ್ತು ಪಾಲನಾ ಮಂಡಳಿ ಸೈಂಟ್ ಲೋರೆನ್ಸ್ ಬೆಸಿಲಿಕಾ,ಅತ್ತೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ,ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್,ಉಡುಪಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಅಂಧತ್ವ ನಿವಾರಣಾ ವಿಭಾಗ) ಉಡುಪಿ,ಇವರೆಲ್ಲರ ಜಂಟಿ ಆಶ್ರಯದಲ್ಲಿ ದಿನಾoಕ 14/11/2021 ರಂದು ಆದಿತ್ಯವಾರ ಸೈಂಟ್ ಲೋರೆನ್ಸ್ ಹೈಸ್ಕೂಲ್,ಅತ್ತೂರು,ಕಾರ್ಕಳ ಇದರ ಸಭಾಂಗಣದಲ್ಲಿ ಸಾರ್ವಜನಿಕ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರ ಹಾಗೂ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ ವ್ಯವಸ್ಥಿತವಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಾಜೇಶ್ ಶೆಣೈ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ,ಲಯನ್ಸ್ ಕ್ಲಬ್ ಆರೋಗ್ಯ ಸೇವೆಗಾಗಿ ಬಹಳಷ್ಟು ಹಣ ವಿನಿಯೋಗಿಸುತ್ತದೆ. ಸಾರ್ವಜನಿಕರು ಇದನ್ನು ಉಚಿತ ಎಂದು ಭಾವಿಸುವುದಕ್ಕಿಂತ ಉತ್ತಮ ಆರೋಗ್ಯ ಉಚಿತ ಎಂದು ಭಾವಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಡಾ| ವಾಣಿಶ್ರೀ, ಪ್ರಸಾದ್ ನೇತ್ರಾಲಯ,ಇವರು ಕಣ್ಣಿನ ಚಿಕಿತ್ಸೆ ಹಾಗೂ ಇದರ ಮಹತ್ವದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಿಲ್ಲಬೆಟ್ಟು ಬಾಲಕೃಷ್ಣ ಹೆಗ್ಡೆ ಹಾಗೂ ಜೆ.ಸಿ.ಐ.,ಕಾರ್ಕಳ ಇದರ ನಿಕಟಪೂರ್ವ ಅಧ್ಯಕ್ಷರಾದ ದಿವಾಕರ ಬಂಗೇರರವರು ಸಂದರ್ಭೋಚಿತವಾಗಿ ಮಾತನಾಡಿದರು.
ಸುಮರು 150 ಜನರು ತಪಾಸಣೆಯ ಸದುಪಯೋಗ ಪಡೆದುಕೊಂಡರು. 50 ಜನರಿಗೆ ಯೂತ್‍ಫಾರ್ ಸೇವಾ ಸಂಸ್ಥೆಯಿಂದ ಆಯುಷ್ಮಾನ್ ಮತ್ತು ಈ-ಶ್ರಮ ಕಾರ್ಡ್ ಮಾಡಿಸಿ ಕೊಡಲಾಯಿತು. 29 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ನೆರವಾಗುವಂತೆ ಪ್ರಸಾದ್ ನೇತ್ರಾಲಯಕ್ಕೆ ಮಾರ್ಗದರ್ಶಿಸಲಾಯಿತು. ಅದಲ್ಲದೆ 35 ಜನರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಯಿತು. ವೇದಿಕೆಯಲ್ಲಿ ಡಾ| ಅನುವಿತಾ ಕಾಮತ್,ಡಾ| ಅಕ್ಷತಾ ನಾಯಕ್,ಧರ್ಮ ಭಗಿನಿ ಪ್ರ್ರೆಸಿಲ್ಲಾ ಮಿನೇಜಸ್, ಸಂತೋಷ್ ಡಿ’ಸಿಲ್ವ, ಧನುಷ್ ಆಚಾರ್ಯ, ಬಾಲಕೃಷ್ಣ ಮೂಲ್ಯ, ಸಿರಿಲ್ ಪಿಂಟೊ, ಅಚ್ಯುತ ಆಚಾರ್ಯ. ಪ್ರಕಾಶ್ ಜೋಗಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮೂಲಕ ಪ್ರಾರಂಭಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕಾರ್ಕಳ, ಇದರ ಅಧ್ಯಕ್ಷರಾದ ಜೋಕಿಂ ಮೈಕಲ್ ಹೆಚ್. ಪಿಂಟೊ ಸ್ವಾಗತಿಸಿ ಗೀತಾ ಶಿಕ್ಷಕಿ ಇವರು ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಬೀಡಿ ಕಾರ್ಮಿಕರ ಆಸ್ಪತ್ರೆಯ ಸೀನಿಯರ್ ಫಾರ್ಮಸಿ ಅಧಿಕಾರಿ ಮೋಹನ್‍ದಾಸ್ ಶೆಣೈ ವಂದಿಸಿದರು. ಅದಲ್ಲದೆ ತಪಾಸಣಾ ಶಿಬಿರಕ್ಕೆ ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ. ಶೇಖರ್ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.