ಮಂಗಳ ವಿದ್ಯಾ ಸಂಸ್ಥೆ 2004 ರಿಂದ ಮೊದಲುಗೊಂಡು ಸತತವಾಗಿ ಪ್ರತಿ ವರ್ಷವೂ ತನ್ನ ಸಾಮಾಜಿಕ ಬದ್ಧತೆಯ ಅಂಗವಾಗಿ ಸರಿಸುಮಾರು 25 ರಿಂದ 30 ರಷ್ಟು ವಿದ್ಯಾರ್ಥಿಗಳಿಗೆ ತನ್ನ ಪಾರಾ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಸಂಪೂರ್ಣ ಉಚಿತ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಇದೆಲ್ಲ ಮಂಗಳಾ ಚಾರಿಟೇಬಲ್ ಟ್ರಸ್ಟ್ (ರಿ.) ಸಂಸ್ಥೆಯ ಮುಖ್ಯಸ್ಥರಾದ ಡಾ. ಗಣಪತಿ ಪಿ ಯವರ ಸಾಮಾಜಿಕ ಕಳಕಳಿಯ, ದೂರದೃಷ್ಟಿಯ ಮತ್ತು ಪರೋಪಕಾರದ ದೃಷ್ಟಿಯಿಂದ ಕೈಗೊಂಡ ಕಾರ್ಯಕ್ರಮದ ಅಂಗವಾಗಿದೆ. ಅದರಂತೆಯೇ 2022ರ ವಿದ್ಯಾ ವರ್ಷದಲ್ಲಿ ಪ್ರತಿ ವರ್ಷದಂತೆ ನಿಜವಾಗಿ ಅಗತ್ಯವಿರುವ 20 ಅರ್ಹ ಮಕ್ಕಳಿಗೆ ಉಚಿತವಾಗಿ ದಾಖಲಾತಿಯನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಅತ್ಯಂತ ಅರ್ಹ ಸಿದ್ಧಿ ಜನಾಂಗದ ಮುವರು ವಿದ್ಯಾರ್ಥಿಗಳನ್ನು ಕೂಡಾ ಆರಿಸಲಾಗಿದೆ.

ಮಂಗಳಾ ಸಮೂಹ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಲ್ ಕುಮಾರ್ ಅವರು ಯಲ್ಲಾಪುರ ಜಿಲ್ಲೆಯ ವಿವಿಧ ಹಳ್ಳಿಗಳನ್ನು ಸಂದರ್ಶಿಸಿ ಸಿದ್ಧಿ ಜನಾಂಗದವರನ್ನು ಸ್ಥಳೀಯರಾದ ಶ್ರೀವರ್ ಬೆಲ್ಲಿ ಮತ್ತು ಯೆಲ್ಲಾಪುರದ ಎಂ.ಎಲ್‍ಸಿಯವರಾದ ಮಾನ್ಯ ಶಾಂತಾರಾಮ ಸಿದ್ಧಿಯವರ ಆಪ್ತ ಸಹಾಯಕ ಭಾಸ್ಕರ ಸಿದ್ಧಿಯವರ ಸಹಾಯದಿಂದ ವಿದ್ಯಾರ್ಥಿಗಳನ್ನು ಆರಿಸಿ ಅವರಿಗೆ ಸಂಸ್ಥೆಯ ಈ ಸೌಲಭ್ಯವನ್ನು ಒದಗಿಸಲಾಗಿದೆ.

ಮೂಲತ ದಕ್ಷಿಣ ಆಫ್ರಿಕಾದಿಂದ ಪೋರ್ಚುಗೀಸ್ ಮತ್ತು ಅರಬ್ ದೇಶಗಳ ವ್ಯಾಪಾರಿಗಳು ಕರೆದು ತಂದ ಅಲ್ಲಿಯ ಗುಡ್ಡಗಾಡು ನಿವಾಸಿಗಳಾದ, ಬಂಟು ಜನಾಂಗದ ಸಿದ್ಧಿ ಜನಸಂಖ್ಯೆ ಸುಮಾರು 50 ಸಾವಿರದಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿ ಸಾಧಾರಣ ಶೇಕಡಾ 30ರಷ್ಟು ಜನತೆ ಕರ್ನಾಟಕದಲ್ಲಿ ವಾಸಿಸುತ್ತಿದ್ದಾರೆ. ಯಲ್ಲಾಪುರದ ಕುಮಾರಿ ಲೇಖನ, ಕುಮಾರಿ ಲಲಿತ ಮತ್ತು ಕುಮಾರಿ ಪೂರ್ಣಿಮಾ ಹೆಸರಿನ ಮೂವರು ಹುಡುಗಿಯರು ಮಂಗಳಾ ವಿದ್ಯಾ ಸಂಸ್ಥೆಗಳಲ್ಲಿ ಬೇರೆ ಬೇರೆ ವಿಭಾಗದಲ್ಲಿ ಕಲಿಯುತ್ತಿದ್ದಾರೆ.



ಈ ಸಂಸ್ಥೆಗಳಲ್ಲಿ ಈ ತನಕ ವಿಧ್ಯಾಭ್ಯಾಸ ಪೂರೈಸಿ ತಮ್ಮ ಜೀವನದ ದಾರಿಗಳನ್ನು ಕಂಡುಕೊಂಡವರಲ್ಲಿ ಭೂತಾನ್, ನೇಪಾಳ, ಪೂರ್ವಾಂಚಲ ರಾಜ್ಯಗಳು, ಉತ್ತರಾಂಚಲ ರಾಜ್ಯಗಳು, ಅಂದರೆ ಮೇಘಾಲಯ, ಮಣಿಪುರ, ಮಿಜೊರಾಂ, ಅರುಣಾಚಲ ಪ್ರದೇಶ ಅಲ್ಲದೆ ಗೋವಾ, ತ್ರಿಪುರ, ಉತ್ತರಪ್ರದೇಶ, ಜಮ್ಮುಕಾಶ್ಮೀರ ಮತ್ತು ಲಕ್ಷದ್ವೀಪ ಅಲ್ಲದೆ ಅಂಡಮಾನ್ ದ್ವೀಪಗಳಿಂದಲೂ ಹಲವಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಪ್ರಕೃತ ವರ್ಷದಲ್ಲಿ ಒಟ್ಟು 70 ವಿದ್ಯಾರ್ಥಿಗಳು ಸಂಪೂರ್ಣ ಉಚಿತ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈವರೆಗೆ 345 ವಿದ್ಯಾರ್ಥಿಗಳು ಇಲ್ಲಿ ವಿದ್ಯೆಯನ್ನು ಪಡೆದು ದೇಶವಿದೇಶಗಳಲ್ಲಿ ವೈದ್ಯಕೀಯ ವಲಯಗಳಲ್ಲಿ ಉತ್ತಮ ಉದ್ಯೋಗ ಗಳಿಸಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಲು ಮಂಗಳಾ ಸಂಸ್ಥೆ ಹೆಮ್ಮೆ ಪಡುತ್ತದೆ.