ಪ್ರಧಾನಿ ಮೋದಿಯವರು ಸಂಪುಟ ಪುನರ್ರಚನೆ ಮಾಡಿದ್ದು, ಕರ್ನಾಟಕದಿಂದ ಮೂವರು ಹೊಸದಾಗಿ ಕೇಂದ್ರ ಸಂಪುಟ ಸೇರಿದ್ದಾರೆ.

ಬೀದರ ಸಂಸದ ಭಗವಂತ ಖೂಬಾ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗದ ಎ. ನಾರಾಯಣಸ್ವಾಮಿ ಕೇಂದ್ರದ ಮಂತ್ರಿಗಳಾಗಿ ಇಂದು‌ ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಇವರು ಕ್ರಮವಾಗಿ ದಲಿತ, ಒಕ್ಕಲಿಗ, ಲಿಂಗಾಯತರನ್ನು ಕೇಂದ್ರ ಸಂಪುಟದಲ್ಲಿ ಪ್ರತಿನಿಧಿಸುವರು.