ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ವತಿಯಿಂದ ದ.ಕ.ಜಿ.ಪ.ಹಿ.ಪ್ರಾ.ಶಾಲೆ, ಮುನ್ನೂರು ಕುತ್ತಾರಿನಲ್ಲಿ ನಡೆದ ಗೌರವ ಸನ್ಮಾನ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಫಾಟನೆಗೊಳಿಸಿದ, ಮೇರಿ ವಿಶ್ವರಾಣಿ ದೇವಾಲಯ, ರಾಣಿಪುರ ಇಲ್ಲಿನ ಧರ್ಮಗುರುಗಳಾದ ವಂ.ಫಾ.ಜಯಪ್ರಕಾಶ್ ಡಿಸೋಜಾರವರು ಮಾತನಾಡಿ “ನಿವೃತ್ತ ಶಿಕ್ಷಕರು ಬಡತನದ ಜೀವಿತದಲ್ಲೂ ಪೋಷಕರ ಅಭಯ ಹಸ್ತವಿಲ್ಲದೆ ಸುಮಾರು 40 ವರ್ಷಗಳಷ್ಟು ಕಾಲ ಹಲವಾರು ಯುವ ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಿಸಿ ಆದರ್ಶರಾಗಿರುತ್ತಾರೆ ಹಾಗೂ ಇಂದಿನ ಯುವ ಶಿಕ್ಷಕರಿಗೆ ಮಾದರಿಯಾಗಿರುತ್ತಾರೆ”  ಎಂದು ನುಡಿದರು. ಇಂತಹ ಒಳ್ಳೆಯ ಕಾರ್ಯಕ್ರಮ ಅಯೋಜಿಸಿದ್ದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಶಾಸಕರಾದ ಹಾಗೂ ಸಮಿತಿಯ ಸ್ವಾಗತಾಧ್ಯಕ್ಷರಾದ  ಕೆ.ಜಯರಾಮ ಶೆಟ್ಟಿಯವರು ನಿವೃತ್ತ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ ಕಳೆದ 26 ವರ್ಷಗಳಿಂದ ವರ್ಷದ ಪ್ರತಿ ತಿಂಗಳೂ ನಿರಂತರವಾಗಿ ಧೈರ್ಯ, ದೇಶಾಭಿಮಾನ, ಸೌಹರ್ದತೆಗೆ  ಹೆಸರುವಾಸಿಯಾದ ಅಬ್ಬಕ್ಕಳಿಗೆ ಸಂಬಂಧಪಟ್ಟ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯು ನೀಡುತ್ತಾ ಬಂದಿದ್ದು, ಇಡೀ ದೇಶಕ್ಕೆ ಹಾಗೂ ರಾಜ್ಯದ ಎಲ್ಲಾ ಕಡೆ  ಅಬ್ಬಕ್ಕಳ ಹೆಸರನ್ನು ಪರಿಚಯಿಸುವ ಕಾರ್ಯ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೀರರಾಣಿ ಅಬ್ಬಕ್ಕಳ ಹೆಸರಿಡುವಂತೆ ಸರಕಾರವನ್ನು ಒತ್ತಾಯಿಸಿದರು.

ಈ ಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸದಾಶಿವ ಉಳ್ಳಾಲ್, ನಿರ್ದೇಶಕರು, ಎಸ್‍ಸಿಡಿಸಿಸಿ ಬ್ಯಾಂಕ್,  ಸದಾನಂದ ಬಂಗೇರ,   ಹೈದರ್ ಪರ್ತಿಪ್ಪಾಡಿ, ಗೌರವ ಉಪಾಧ್ಯಕ್ಷರು, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ( (ರಿ), ಡಾ.ಪ್ರಶಾಂತ್ ಕುಮಾರ್, ಶಿಕ್ಷಣ ಸಮನ್ವಯ ಅಧಿಕಾರಿ, ಮಂಗಳೂರು ದಕ್ಷಿಣ ಕ್ಷೇತ್ರ, ರವೀಂದ್ರ ರಾಜೀವ್ ನಾಯ್ಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮುನ್ನೂರು,  ರೆಹೆನಾ, ಸಂಪನ್ಮೂಲ ವ್ಯಕ್ತಿ, ಮುನ್ನೂರು ಕ್ಲಸ್ಟರ್,  ನಳಿನಾಕ್ಷಿ, ಮುಖ್ಯ ಪುಸ್ತಕ ಬರಹಗಾರರು, ಸಂಜೀವಿನಿ ಒಕ್ಕೂಟ, ಮುನ್ನೂರು, ಉಳ್ಳಾಲ ನಗರಸಭೆಯ ಸದಸ್ಯರಾದ ಸ್ವಪ್ನಾ ಹರೀಶ್, ಮುನ್ನೂರು ಗ್ರಾಮ ಪಂಚಾಯತ್‍ನ ವಾರ್ಡು ನಂಬ್ರ 6ರ ಸದಸ್ಯರಾದ ಕವಿತಾ,  ಪುಷ್ಪಾ,  ದ.ಕ.ಜಿ.ಪ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ(ಪ್ರಭಾರ)  ಎನ್.ಶಶಿಕಲಾ, ಎಸ್‍ಡಿಎಮ್‍ಸಿ ಅಧ್ಯಕ್ಷರಾದ ಉಸ್ಮಾನ್ ಫಯಾಝ್, ಉಪಾಧ್ಯಕ್ಷರಾದ  ವಸಂತಿ ಉಪಸ್ಥಿತರಿದ್ದರು.     

ಈ ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಿ.ಎನ್.ರಾಘವ, ಕೆ.ಎಂ.ಕೆ.ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ, ದೇವಕಿ ಉಳ್ಳಾಲ್, ಶಶಿಕಲಾ ಗಟ್ಟಿ, ಅನುಪಮ ಜೆ, ಮಲ್ಲಿಕಾ ಭಂಡಾರಿ, ಸರೋಜ ಕುಮಾರಿ, ಮಾಧವಿ ಉಳ್ಳಾಲ್, ಹೇಮಾ ಕಾಪಿಕಾಡು, ಕ್ಲೇರಾ ಕುವೆಲ್ಲೋ, ವಾಣಿ ಉಚ್ಚಿಲ್, ಶಶಿಕಾಂತಿ ಉಳ್ಳಾಲ್, ಸರೋಜಾ ರಾವ್, ಮಲ್ಲಿಕಾ ಉಳ್ಳಾಲ್‍ಬೈಲ್, ಸುಜಾತ, ಲತಾ ವಿಶ್ವನಾಥ್,  ವಿ.ಶೋಭಾ, ಚಿತ್ರಜಗನ್, ಸ್ವಪ್ನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 

ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.