ಛತ್ತೀಸಗಡದಲ್ಲಿ ಕಾಂಗ್ರೆಸ್ ಖಚಿತ ಗೆಲುವು ಕಾಣಲಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಟಿಆರ್‌ಎಸ್ ಇಲ್ಲವೇ ಬಿಆರ್‌ಎಸ್ ಪಕ್ಷದ ಆಡಳಿತಕ್ಕೆ ಏಟು ಕೊಡಲಿದೆ ಎಂಬ ಸಮೀಕ್ಷೆಗಳು ಹೊರಬಿದ್ದಿವೆ. 


ಮಧ್ಯ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತವೆ. ಹಾಗಾಗಿ ಅವು ಸರಕಾರ ರಚಿಸಲು ಸಾಧ್ಯ ಎನ್ನಲಾಗಿದೆ. ಮಿಜೋರಾಂನಲ್ಲಿ ಜೋರಾಮ್ ಪೀಪಲ್ಸ್ ಮೂವ್ಮೆಂಟ್ಸ್ ಫ್ರಂಟ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಇರುವುದು ವ್ಯಕ್ತಗೊಂಡಿದೆ.