ಮಂಗಳೂರು: ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 1ನೇ ರ್ಯಾಂಕ್  ಅಮೂಲ್ಯ ಕಾಮತ್  ಕಾಮರ್ಸ್ ವಿಭಾಗದಲ್ಲಿ 1ನೇ ರ್ಯಾಂಕ್  ದೀಪಶ್ರೀ ಹಾಗೂ ಆಟ್ಸ್ ವಿಭಾಗದಲ್ಲಿ ತಾಫೀಮ ಫಾತಿಮಾ 8 ನೇ ರ್ಯಾಂಕ್ ಇವರುಗಳನ್ನು ಶಾಸಕರ ಕಛೇರಿಯಲ್ಲಿ ಬರಮಾಡಿಕೊಂಡು ಸನ್ಮಾನಿಸಲಾಯಿತು. ದ.ಕ. ಜಿಲ್ಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಇವರುಗಳನ್ನು ಅಭಿನಂದಿದಿ ಮುಂದಿನ ವಿದ್ಯಾರ್ಥಿ ಜೀವನಕ್ಕೆ ಶುಭ ಹಾರೈಸಿ ಉತ್ತಮ ಶಿಕ್ಷಣ ಪಡೆದು ಜಿಲ್ಲೆಯ ರಾಜ್ಯದ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿ ನಿಮ್ಮ ಜೀವನವೂ ಉಜ್ವಲವಾಗಲಿ ಎಂದು ಎಂ.ಎಲ್.ಸಿ. ಐವನ್ ಡಿಸೋಜಾರವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾರರಾದ ಕೆ. ದೇವರಾಜ್ ಮಾತನಾಡಿ ಭವಿಷ್ಯದ ದಿನಗಳಲ್ಲಿ ವಿದ್ಯಾರ್ಥಿಗಳು ಶ್ರಮ ವಹಿಸಿ ಕಲಿಯಬೇಕಾಗುತ್ತದೆ ಹಾಗೆಯೇ ಫಲಿತಾಂಶವೂ ಅಷ್ಟೆ ಎತ್ತರಕ್ಕೆ ಅವರನ್ನು ಕೊಂಡೋಯ್ಯುತ್ತದೆ. ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಕಾರ್ಫೋರೇಟರಾದ ಡಿ.ಕೆ. ಅಶೋಕ್ ಕುಮಾರ್, ಜೆ. ನಾಗೇಂದ್ರ ಕುಮಾರ್, ಅಮೃತ್ ವಿ ಕದ್ರಿ, ಭಾಸ್ಕರ್ ರಾವ್, ಪದ್ಮನಾಭ ಅಮೀನ್, ಗಿರೀಶ್ ಆಳ್ವ, ವಿಕಾಸ್ ಶೆಟ್ಟಿ, ಬಾಜಿಲ್ ಕುಲಶೇಖರ್, ಯೋಗಿಶ್ ನಾಯಕ್,  ಅಶ್ರಫ್ ಅಡ್ಯಾರ್ ಪ್ರೇಮ್ ಬಲ್ಲಾಳ್ ಬಾಗ್ ಮುಂತಾದವರು ಉಪಸ್ಥಿತರಿದ್ದರು.