ಬಿಹಾರ ರಾಜ್ಯದ ಮುಜಾಫರ್‌ಪುರ ಜಿಲ್ಲೆಯ ಸಿಕಂದರ್ ಪುರದಲ್ಲಿ ಮಹಿಳೆಯೊಬ್ಬಳು ಪ್ರಿಯಕರ ಮತ್ತು ಮನೆಯವರ ಸಹಕಾರದಿಂದ ಗಂಡನನ್ನು ಕೊಂದು ಮುಚ್ಚಿಡಲು ಹೋಗಿ ಪೋಲೀಸರ ಅತಿಥಿ ಆಗಿದ್ದಾಳೆ.

ಕೊಲೆಯಾದ 30ರ ರಾಕೇಶ್ ಅಕ್ರಮ ಮಧ್ಯ ಮಾರಾಟದಲ್ಲಿ ತೊಡಗಿದ್ದ. ಹಾಗಾಗಿ ಮನೆಗೆ ಬರುತ್ತಿದ್ದುದು ಕಡಿಮೆ. ಹಣ ಹಾಕಿದ ಸುಭಾಷ್ ಮನೆಗೆ ಹತ್ತಿರ ಆಗಿದ್ದ.

ರಾಕೇಶ್ ಹೆಂಡತಿ ರಾಧಾ, ಆಕೆಯ ಪ್ರಿಯತಮ ಸುಭಾಷ್, ರಾಧಾ ತಂಗಿ ಕೃಷ್ಣಾ ಮತ್ತಾಕೆಯ ಗಂಡನನ್ನು ಕೊಲೆ ಆರೋಪ ಮತ್ತು ಸಾಕ್ಷ್ಯ ನಾಶದ ಆರೋಪದಲ್ಲಿ ಬಂಧಿಸಲಾಗಿದೆ.

ಸುಭಾಷ‌ನು ರಾಕೇಶನನ್ನು ತುಂಡು ಮಾಡಿದ್ದ. ವಾಸನೆ ಬಾರದಂತಿರಲು ಮತ್ತು ಮಾಂಸ ಕರಗಲು ರಾಸಾಯನಿಕ ಬಳಸಿದ್ದರು. ಅದು ಸ್ಫೋಟಗೊಂಡ ಕಾರಣ ವಿಷಯ ಹೊರಬಿದ್ದು, ಪೋಲೀಸರು ಬಂದಿದ್ದಾರೆ. ಶವದ ಮಾಂಸದ ತುಂಡುಗಳು ಸ್ಫೋಟದಿಂದ ಚೆಲ್ಲಾಡಿದ್ದವು.