ಕಟೀಲ್: ಕರಾಟೆಯಿಂದ ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿಯೂ ಸದೃಢವಾಗಿಸುತ್ತದೆ ಹಾಗೂ ಬಿಎಂ ನರಸಿಂಹನವರು ಕರಾಟೆ ಅಂತಹ ಕ್ರೀಡೆಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ಕರಾಟೆ ಅಂತಹ ವಿದ್ಯೆಯನ್ನು ಕಲಿಸಿ ತನ್ನನ್ನು ತಾನೇ ಆತ್ಮ ರಕ್ಷಿಸಬಹುದು ಎಂದು ಕಲಿಸಿದ್ದಾರೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.

ಅವರು ಕಟೀಲು ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಕರಾಟೇ ವಿದ್ಯಾರ್ಥಿಗಳಿಗೆ ಬೆಲ್ಟ್‌ ವಿತರಣಾ ಮತ್ತು ಬಿ ಎಂ ನರಸಿಂಹನ್ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಡಿದರು. ಕಟೀಲು ದೇವಳದ ಪ್ರಧಾನ ಅರ್ಚಕ ಹರಿ ನಾರಾಯಣ ದಾಸ ಆಸ್ರಣ್ಣ ಆಶೀರ್ವಾಚನಗೈದರು.  ಈ ಸಂದರ್ಭ ಗ್ರಾಂಡ್ ಮಾಸ್ಟರ್ ಬಿ ಎಂ ನರಸಿಂಹನ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕರಾಟೆಯಲ್ಲಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಸಮೃದ್ದಿ ಶೆಟ್ಟಿ, ತನಿಷ್ಕ್, ಕೃತಿಕಾ, ನಿಹಾರಿಕಾ, ವಿಖ್ಯಾತ್ ಎನ್ ಕುಲಾಲ್, ಕರಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜನಾರ್ಧನ್, ಮನೀಶ್, ಸುರೇಂದ್ರ, ಸುರೇಶ್ ಶೆಟ್ಟಿ, ಈಶ್ವರ್ ಕಟೀಲ್, ಮೊರ್ಗನ್, ಚಂದ್ರಹಾಸ್, ಚಂದ್ರಹಾಸ ಅಂಚನ್,  ನಾಗರಾಜ್ ಕುಲಾಲ್, ಜಯಪ್ರಕಾಶ್, ಸೌರಭ್ ಮತ್ತಿತತರು ಉಪಸ್ಥಿತರಿದ್ದರು.