ಕಾರ್ಕಳ: ಸಹಕಾರ ಭಾರತಿ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಾಣೂರು ನರಸಿಂಹ ಕಾಮತ್ ರವರನ್ನು ಡಿಸೆಂಬರ್ 28 ಶನಿವಾರ 2024 ರಂದು ಉಡುಪಿ ಕಿಸಾನ್ ಸಭಾ ಸಭಾಂಗಣದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ದಿನೇಶ ಹೆಗ್ಡೆ ಆತ್ರಾಡಿ ಯವರು ಸಹಕಾರಿ ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು.

ಸಾಣೂರು ನರಸಿಂಹ ಕಾಮತ್ ರವರು ಎರಡು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕಳೆದ ಅವಧಿಯಲ್ಲಿ ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಸ್ತುತ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ , ಮಂಗಳೂರು ಹಾಗೂ ಭಾರತಿ ಟೂರಿಸಂ ಡೆವಲಪ್ಮೆಂಟ್ ಕಾರ್ಪೊರೇಟಿವ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಜ್ಯಾಧ್ಯಕ್ಷರಾದ ಪ್ರಭುದೇವ .ಆರ್. ಮಾಗನೂರು, ರಾಜ್ಯ ಸಂಘಟನಾ ಪ್ರಮುಖರಾದ  ಮಂಜುನಾಥ, ರಾಜ್ಯ ಮಹಿಳಾ ಪ್ರಮುಖರಾದ ವಿದ್ಯಾ ಪೈ, ರಾಜ್ಯದ ನೂತನ ಹಾಲು ಪ್ರಕೋಷ್ಠದ ಸಂಚಾಲಕರಾದ ಬೋಳ ಸದಾಶಿವ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮಂಜುನಾಥ ಎಸ್ ಕೆ, ಹಿರಿಯರಾದ ಮೋಹನ್ ಕುಂಬಳೇಕರ್, ರವಿರಾಜ ಹೆಗ್ಡೆ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ನಾಯಕ್, ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ ಉಪಸ್ಥಿತರಿದ್ದರು.