ಕಾರ್ಕಳ, ಜ 03: ಕಾರ್ಕಳ ಮಿಯ್ಯಾರು ಲವ-ಕುಶ ಕಂಬಳವನ್ನು ಕಂಬಳದ ಕೆರೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ನಂತರ ಶಾಸಕ ವಿ ಸುನೀಲ್ ಕುಮಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್ ಕೋಟ್ಯಾನ್, ಮಿಯ್ಯಾರು ಚರ್ಚ್ ಧರ್ಮಗುರು ರೆ. ಫಾ. ಕ್ಯಾನುಟ್  ಬರ್ಬೋಜಾ, ಮಿಯ್ಯಾರು ಲವ ಕುಶ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯoತಾಯ, ಸಂಘಟನಾ ಪ್ರಧಾನ ಕಾರ್ಯದರ್ಶಿ, ಕಂಬಳದ ಬೀಷ್ಮ ಪ್ರೊ. ಗುಣಪಾಲ್ ಕಡಂಬ, ಕೋಶಾಧಿಕಾರಿ ಶ್ಯಾಮ ಏನ್ ಶೆಟ್ಟಿ, ಸಹ ಕೋಶಾಧಿಕಾರಿ ರವೀಂದ್ರ ಕುಮಾರ್ ಕುಕ್ಕುಂದೂರು, ಕಾರ್ಯದರ್ಶಿ ದಯಾನಂದ ಬಂಗೇರ, ಉಪಾಧ್ಯಕ್ಷ ಅಂಥೋನಿ ಡಿಸೋಜಾ ನಕ್ರೆ, ಉದಯ ಎಸ್ ಕೋಟ್ಯಾನ್ ಜೊತೆ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಕೆ ಎಂ ಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಬಜಗೋಳಿ, ಉದ್ಯಮಿ ಸುನಿಲ್ ಬಜಗೋಳಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿ ಜೆ ಪಿ   ಅಧ್ಯಕ್ಷ ನವೀನ್ ನಾಯ್ಕ್, ಮಿಯ್ಯಾರು ಗ್ರಾ ಪಂ ಅಧ್ಯಕ್ಷೆ ಸನ್ಮತಿ ನಾಯಕ್, ಸದಸ್ಯ ಮಾಧವ ಕಾಮತ್, ಸ್ವರ್ಣ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಬ್ಬೀರ್ ಅಹ್ಮದ್ ಮಿಯ್ಯಾರು, ಮುಂಬೈ ಉದ್ಯಮಿ ಅರುಣ್ ಮಹಾಬಲ ಪೂಜಾರಿ, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಬಿ ಆರ್ ಮಂಜಪ್ಪ ಕಾರ್ಕಳ ನಗರ ಠಾಣಾ ಪಿಎಸ್ಐ ಮುರಳೀಧರ, ಪಿಎಸ್ಐ ಶಿವ ಕುಮಾರ್ ಎಸ್ ಆರ್, ಅಮ್ಮನ ನೆರವು ಚಾರಿಟೇಬಲ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ, ಉದ್ಯಮಿಗಳಾದ ಜಯರಾಮ್ ಪ್ರಭು, ಉಮೇಶ್ ರಾವ್ ಚಿರಾಗ್, ರಾಜು ಎಂ ಶೆಟ್ಟಿ, ನಿತೇಶ್ ಕುಮಾರ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.