ಕಿನ್ನಿಗೋಳಿ:  ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಮೂಲಗಳ ಸರ್ವೆ ಕಾರ್ಯ ನಡೆಸಲಾಯಿತು. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಆರು ಗ್ರಾಮಗಳಾದ ಕಿಲೆಂಜೂರು , ನಡುಗೋಡು, ಕೊಂಡೆಮೂಲ, ಮೆನ್ನಬೆಟ್ಟು , ತಾಳಿಹಾಡಿ, ಎಳತ್ತೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ಗ್ರಾಮಗಳ ಪಕ್ಕದ ನೀರಿನ ಮೂಲಗಳಾದ ನಂದಿನಿ ಹಾಗೂ ಶಾಂಭವಿ ನದಿಗಳ ನದಿ ಪಾತ್ರದ ನೀರಿನ ಮೂಲಗಳನ್ನು ಪರೀಶೀಲನೆ ನಡೆಸಲಾಯಿತು.

ಕರ್ನಾಟಕ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ಚಂದ್ರಶೇಖರ್‌, ಸಹಾಯಕ ಅಭಿಯಂತರ ಶೇಖರ್‌, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಸಾಯೀಶ್‌ ಚೌಟ, ಪಟ್ಟಣ ಪಂಚಾಯತ್‌ ಕಿರಿಯ ಅಭಿಯಂತರ ನಾಗರಾಜು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಯೋಜನೆಯ ಬಗ್ಗೆ ವಿಸ್ತತ ವರದಿ ತಯಾರಿಸಲು ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಮೈಸೂರಿನ ಮಾರ್ಸ್‌ ಹಾಗೂ ಸಿಬ್ಬಂದಿ ತಂಡ ಕೆಲಸ ಮಾಡಲಿದೆ. ದ್ರವ ತ್ಯಾಜ್ಯ ಘಟಕ (ಯುಜಿಡಿ) ಸ್ಥಾಪಿಸಲು ಸರ್ವೆ ಕೂಡ ಇದರೊಂದಿಗೆ ನಡೆಯಲಿದೆ.