ಮ೦ಗಳೂರು: ಸ್ವಸ್ತಿಕಾ ನ್ಯಾಷನಲ್‌ ಸ್ಕೂಲ್‌ನ ರಾಷ್ತ್ರೀಯ ಸೇವಾಯೋಜನಾ ಘಟಕದ 2 ದಿನಗಳ ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರದ ಉದ್ಘಾಟನೆಯು ಜನವರಿ 29, 2021, ಶುಕ್ರವಾರದಂದು ನಡೆಯಿತು. ಮಂಗಳೂರಿನ ACPಯಾದ ಶ್ರೀಯುತ M.A.ನಟರಾಜ್‌ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಇಂದಿನ ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕಾಗಿ ಸೀಮಿತವಾಗದೆ, ಜೀವನ ಪರೀಕ್ಷೆಯಲ್ಲೂ ಸಹ ಯಶಸ್ಸನ್ನು ಕಾಣಬೇಕು”. ಅದಕ್ಕಾಗಿ ಆತ್ಮಸ್ತೈರ್ಯವನ್ನು ಹೆಚ್ಚಿಸಲು ಇಂತಹ ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿ ಶುಭಹಾರೈಸಿದರು. 

ಕರ್ನಾಟಕ ಬ್ಯಾಂಕಿನ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಆಗಿರುವ ಶೃೀಯುತ ಪ್ರಸನ್ನ ತೆನೆಸಿರಿ ಇವರು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದರು. ಅದೆ ರೀತಿ ಮಂಗಳೂರು SEZ Ltd. ನ ಸಾರ್ವಜನಿಕ ಸಂಪರ್ಕ ಅಧಿಕಾರಿ  ಶ್ರೀ ರಾಮಚಂದ್ರ ಭಂಡಾರ್ಕರ್‌ ಹಾಗೂ ಡಾ.ಸುಕನ್ಯ ರಾವ್‌ Financial Services Professional ಇವರು ಉಪಸ್ಥಿತರಿದ್ದು ಇಂತಹ ಕಾರ್ಯಾಗಾರವನ್ನು ಸದುಪಯೋಗಪಾಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ 2 ದಿನಗಳ ಪರಿಣಾಮಕಾರಿ ಭಾಷಣ ಕಲೆ ಕಾರ್ಯಾಗಾರವನ್ನು ನೆಡೆಸಿಕೊಡಲಿರುವ ಸಂಪನ್ಮೂಲ ವ್ಯಕ್ತಿಗಳಾದ ಸತೀಶ್‌ ಭಟ್‌ ಬಿಳಿನೆಲೆ ಹಾಗೂ ಡಾ.ರಾಘವೇಂದ್ರ ಹೋಳ್ಳ ಇವರು ಉಪಸ್ಥಿತರಿದ್ದರು. 

ಕಾಲೇಜಿನ ಪ್ರಾಂಶುಪಾಲೆ ರಾಜೇಶ್ವರಿ ಡಿ. ಶೆಟ್ಟಿ ಇವರು ಕಾರ್ಯಾಗಾರದ ಬಗ್ಗೆ ಪ್ರಾಸ್ಥಾವಿಕ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.  ರಾಷ್ತ್ರೀಯ ಸೇವಾಯೋಜನೆಯ ಯೋಜನಾಧಿಕಾರಿಯಾದ ಸೌಮ್ಯ ಶೆಟ್ಟಿ ಇವರು ಸಭೆಯನ್ನು ಸ್ಡಾಗತಿಸಿದರು ಹಾಗು ಕಾರ್ಯದರ್ಶಿಯಾದ ಅಭಿನ್‌  ವಂದನಾರ್ಪಣೆಯನ್ನು ಸಲ್ಲಿಸಿದರು.