ಮಡಂತ್ಯಾರು: ನೇಪಾಳದ ಪೋಖಾರದಲ್ಲಿ ನಡೆದ ಅಂತರಾಷ್ಟೀಯ ತ್ರೋಬಾಲ್ ಪಂದ್ಯಾಟದಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಾಂಪಿಯನ್‍ಶಿಪ್ ಪ್ರಶಸ್ತಿಗಳನ್ನು  ಮುಡಿಗೇರಿಸಿಕೊಂಡಿವೆ. ಸೆಕ್ರೇಡ್ ಹಾರ್ಟ್‍ಕಾಲೇಜು ಮಡಂತ್ಯಾರಿನ 6 ವಿದ್ಯಾರ್ಥಿಗಳಾದ ಯುನಿತ್.ಕೆ, ಶಾನ್ ಲಿಂಟನ್ ವೇಗಸ್ ಮತ್ತು ಅವಿನಾಶ್  ಹಾಗೂ ವಿದ್ಯಾರ್ಥಿನಿಯರಾದ ಡ್ಯಾಫ್ನಿ ವೆರೊನಿಕ ಮಿಸ್ಕಿತ್, ಸುಪ್ರಿಯಾಎಸ್.ಪಿ., ಮತ್ತು ಭೂಮಿಕಾ ಇವರು ಕ್ರಮವಾಗಿ ಭಾರತದ ಪುರುಷರ ಮತ್ತು ಮಹಿಳೆಯರ  ವಿಜೇತತಂಡವನ್ನು ಪ್ರತಿನಿಧಿಸಿದ ಕೀರ್ತಿಗೆ ಪಾತ್ರರಾದರು.

ಲೀಗ್‍ ಹಾಗೂ ನಾಕೌಟ್  ಮಾದರಿಯಲ್ಲಿ ನಡೆದ ಈ ಪ್ರತಿಷ್ಠಿತ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ 8 ದೇಶಗಳು ಭಾಗವಹಿಸಿದ್ದರೆ, ಮಹಿಳಾ ವಿಭಾಗದಲ್ಲಿ ಒಟ್ಟು 9 ದೇಶಗಳು ಭಾಗವಹಿಸಿದ್ದವು.

ಪುರುಷರ ತಂಡವು  ಬಿ ಪೂಲಿನಲ್ಲಿದ್ದು ಲಿಂಗ್‍ ಹಂತದ ಮೊದಲ ಪಂದ್ಯದಲ್ಲಿ ನೆದರ್‍ಲ್ಯಾಂಡ್‍ ತಂಡವನ್ನು25-13 , 25-15 ನೇರ ಸೆಟ್‍ಗಳಿಂದ , ದ್ವಿತೀಯ ಪಂದ್ಯದಲ್ಲಿ ಮಲೇಷಿಯಾವನ್ನು 25-21,25-18ರ ನೇರ ಸೆಟ್‍ಗಳಿಂದ.,ತೃತೀಯ ಪಂದ್ಯದಲ್ಲಿ ಭೂತಾನ್ ದೇಶವನ್ನು 25-20, 25-23ರ ನೇರ ಸೆಟ್‍ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮಿಫೈನಲ್‍ನಲ್ಲಿ ಶ್ರೀಲಂಕಾವನ್ನು ರೋಮಾಂಚಕವಾಗಿ 26-24 , 22-25, 15-12 ಸ್ಕೋರ್‍ಗಳಿಂದ ಮೂರನೇ ಸೆಟ್‍ನಲ್ಲಿ ಸೋಲಿಸಿ ಫೈನಲ್‍ಗೇರಿದ್ದರು. ಫೈನಲ್‍ ಕಾದಾಟದಲ್ಲಿ ಆತೀಥೇಯ ನೇಪಾಳ ತಂಡವನ್ನು ಮೂರನೇ ಸೆಟ್‍ನಲ್ಲಿ 22-25, 25-21, 17-15 ಸ್ಕೋರ್‍ಗಳೊಂದಿಗೆ ಕುತೂಹಲಕಾರಿಯಾಗಿ  ಸೋಲಿಸಿ ಚಾಂಪಿಯನ್‍ಶಿಪ್ ಪಟ್ಟವನ್ನು ತನ್ನದಾಗಿಸಿತು. ಪಂದ್ಯಾಟದ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ಸೇಕ್ರೆಡ್ ಹಾರ್ಟ್‍ಕಾಲೇಜು ಮಡಂತ್ಯಾರಿನ ಯುನಿತ್. ಕೆ ಟೂರ್ನಮೆಂಟ್‍ನ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.

9 ತಂಡಗಳು ಭಾಗವಹಿಸಿದ್ದ ಮಹಿಳಾ ಪಂದ್ಯಾಟದಲ್ಲಿ ಭಾರತ ತಂಡವು ಎ ಪೂಲಿನಲ್ಲಿ ಸ್ಥಾನ ಪಡೆದಿತ್ತು. ತನ್ನ ಮೊದಲ ಪಂದ್ಯಾಟದಲ್ಲಿ ಭಾರತ ತಂಡವು ಬೂತಾನ್‍ ತಂಡವನ್ನು 25-20,25-16 ರ ನೇರ ಸೆಟ್‍ಗಳಿಂದ ಮಣಿಸಿದರೆ, ದ್ವಿತೀಯ ಪಂದ್ಯಾಟದಲ್ಲಿ ನೆದರ್‍ಲ್ಯಾಂಡನ್ನು 25-14,  25-19ರ ನೇರ ಸೆಟ್‍ಗಳಿಂದ ಸೋಲಿಸಿತ್ತು, ಮೂರನೇ ಪಂದ್ಯಾಟದಲ್ಲಿ ಶ್ರೀಲಂಕಾವನ್ನು 25-23 , 19-25 ಮತ್ತು 16-14 ರೊಂದಿಗೆ ವಿರೋಚಿತವಾಗಿ ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿತ್ತು. ಭಾರತವು ಸೆಮಿಫೈನಲ್‍ನಲ್ಲಿ ಬಾಂಗ್ಲಾದೆದುರು 25-20, 25-21 ರ ಸುಲಭಜಯ ಪಡೆದು, ಫೈನಲ್‍ನಲ್ಲಿ ಭಾರತವು ನೇಪಾಳವನ್ನು 27-25, 20-25 ಹಾಗೂ 25-22 ರ ಪ್ರಾಯಾಸದ ಗೆಲುವು ಪಡೆದು ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿತು.

ಪಂದ್ಯಾಟದ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ  ಭಾರತ ತಂಡದ ಆಟಗಾರ್ತಿ ಡ್ಯಾಫ್ನಿ ವೆರೊನಿಕಾ ಮಿಸ್ಕಿತ್ ಟೂರ್ನಮೆಂಟ್‍ನ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರೆ, ಫೈನಲ್ ಪಂದ್ಯಾಟದಲ್ಲಿ ಶ್ರೇಷ್ಠ  ಮಟ್ಟದ ಪ್ರದರ್ಶನ ನೀಡಿದ ಭಾರತ ತಂಡದ ನಾಯಕಿ ಸುಪ್ರಿಯಾ ಎಸ್.ಪಿ ಇವರು ಫೈನಲ್‍ನ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು ಇವರೀರ್ವರೂ ಸೇಕ್ರೆಡ್ ಹಾರ್ಟ್‍ಕಾಲೇಜು ಮಡಂತ್ಯಾರಿನ ವಿದ್ಯಾರ್ಥಿನಿಯರೆಂಬುದು ವಿಶೇಷ,