ಮಂಗಳೂರು:  ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಳದೆ 12 ದಿನಗಳಿಂದ ನಡೆಯುತ್ತಿರುವ ಶಕ್ತಿ ಕ್ಯಾನ್‍ ಕ್ರಿಯೇಟ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಂಗಳೂರಿನ ಖ್ಯಾತ ವಕೀಲರು ಹಾಗೂ ನೋಟರಿಯಾಗಿರುವ ಬಿ. ಗುರುಪ್ರಸಾದ್ ಶೆಟ್ಟಿಯವರು ಆಗಮಿಸಿದರು. ನಂತರ ಮಾತನಾಡಿದ ಅವರು ಶಕ್ತಿ ವಿದ್ಯಾ ಸಂಸ್ಥೆಯು ಕೇವಲ ಶಕ್ತಿಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಾತ್ರವಲ್ಲದೆ ಬೇರೆ ಬೇರೆ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. 

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಈ ಬೇಸಿಗೆ ಶಿಬಿರವು ಬಹಳ ಪ್ರಯೋಜನಕಾರಿಯಾಗಿದೆ. ಈಗಿನ ಮಕ್ಕಳಲ್ಲಿ ಇತರ ಮಕ್ಕಳ ಜೊತೆ ಬೇರೆಯುವ ಗುಣವನ್ನು ರೂಢಿಸಿಕೊಳ್ಳಲು ಇದೊಂದು ಅವಕಾಶವಾಗಿದೆ. ರಜೆಯ ಸಮಯದಲ್ಲಿ ಅನೇಕ ಮಕ್ಕಳು ಮೊಬೈಲ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳ ಜೊತೆ ಸಮಯವನ್ನು ವ್ಯರ್ಥಮಾಡುವ ಬದಲು ಇಂತಹ ಶಿಬಿರದ ಮೂಲಕ ಅನೇಕ ಹೊಸ ಹೊಸ ವಿಷಯಗಳನ್ನು ಅಧ್ಯಯನ ಮಾಡಲು ಇದೊಂದು ಉಪಯುಕ್ತ ವೇದಿಕೆಯಾಗಿದೆ. ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳಿಗೆ ಕೇವಲ ಅಂಕ ಪಡೆಯುವುದು ಒಂದೇ ಗುರಿಯಾಗದೇ ಸಮಾಜದಲ್ಲಿ ಎಲ್ಲರ ಜೊತೆ ಬೆರೆತು ಸಮಾಜಮುಖಿಯಾಗಿ ಬದುಕುವ ಜೀವನ ಪದ್ದತಿಯನ್ನುಇಂತಹ ಶಿಬಿರದಲ್ಲಿ ಪಡೆಯಲು ಸಾಧ್ಯ. ಶಕ್ತಿ ವಿದ್ಯಾ ಸಂಸ್ಥೆಯು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸರ್ಮತೋಮುಖ ಅಭಿವೃದ್ದಿಗೋಸ್ಕರ ಕಾರ್ಯನಿರ್ವಹಿಸುತ್ತಿರುವ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಇದೊಂದು ಗುರುತಿಸಲ್ಪಡುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಿದರು. 

ವಿದ್ಯಾರ್ಥಿಗಳಾದ ಆಲೇನ್, ಕೋಯಿಶಾ ಮತ್ತು ಶ್ಲೋಕ ಹಾಗೂ ಪೋಷಕರಾದ ಚೇತನಾರವರು ಈ ಬೇಸಿಗೆ ಶಿಬಿರದ ಅನುಭವವನ್ನು ಹಂಚಿಕೊಂಡರು.

ಈ ಬೇಸಿಗೆ ಶಿಬಿರದಲ್ಲಿ ಮ್ಯಾಜಿಕ್, ಮಡಿಕೆ ತಯಾರಿಕೆ, ಚಲನಚಿತ್ರದ ವಿಕ್ಷಣೆ, ಪೈಜಾಮ ಪಾರ್ಟಿ, ಬೆಂಕಿ ಇಲ್ಲದೆ ಅಡುಗೆ,ಕಥೆ ಹೇಳುವುದು, ಆರೋಗ್ಯ ಮತ್ತು ನೈರ್ಮಲ್ಯ, ವಾಟರ್ ಸ್ಪ್ಲಾಶ್ ಪಾರ್ಟಿ, ತೋಟಗಾರಿಕೆ, ನೃತ್ಯ, ಜುಂಬಾ, ಈಜು, ಆಟೋಟ, ನಾಟಕ, ಗಾಳಿಪಟ ಹಾರಾಟ, ಬಾಟಲ್ ಪೆಯಿಟಿಂಗ್ ಸೇರಿದಂತೆ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮವನ್ನು ಈ 12 ದಿನದಲ್ಲಿ ಆಯೋಜಿಸಲಾಗಿತ್ತು. ಇದರ ಜೊತೆ ತಣ್ಣಿರುಬಾವಿ ಸಮುದ್ರ ತೀರಕ್ಕೆ ಮಕ್ಕಳ ಭೇಟಿಯು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ ಮಾತನಾಡಿ ನಾವು 6 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಈ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬರಲು ನಮ್ಮ ಸಂಸ್ಥೆಯ ಶಿಕ್ಷಕಶಿಕ್ಷಕೇತರ ಸಿಬ್ಬಂದಿಗಳು ಮಹತ್ತರವಾದ ಶ್ರಮವನ್ನು ವಹಿಸಿರುವುದನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.  ಶಕ್ತಿ ಶಿಕ್ಷಣ ಸಂಸ್ಥೆಯು ರಾಜ್ಯಮಟ್ಟದಲ್ಲಿ ಶೈಕ್ಷಣಿಕವಾಗಿ ಉತ್ತಮವಾಗಿರುವಂತಹ ಫಲಿತಾಂಶವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. 

ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ಬಬಿತಾ ಸೂರಜ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಚೇತನ ತಲಪಾಡಿ ಮತ್ತು ಧನ್ಯವಾದವನ್ನು ಸೀಮಾ ನಡೆಸಿಕೊಟ್ಟರು. ಅದ್ಯಾಪಕಿ ಪ್ರೀಯದರ್ಶಿನಿ ನಿರೂಪಿಸಿದರು, 

ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಮನಸೂರೆಗೊಳ್ಳುವಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.